ಆಲೆಟ್ಟಿ ಪಂಚಾಯತ್ ಕಾರ್ಯದರ್ಶಿ ಸೃಜನ್ ಎ ಜಿ ವರ್ಗಾವಣೆ ಆದೇಶ ರದ್ದು

0

ಆಲೆಟ್ಟಿ ಗ್ರಾಮ ಪಂಚಾಯತಿನ ಗ್ರೇಡ್ 1 ಕಾರ್ಯದರ್ಶಿ ಸೃಜನ್ ಎ ಜಿ ರವರಿಗೆ ಮಾರ್ಚ್‌ ತಿಂಗಳಲ್ಲಿ ಬೆಳ್ಳಾರೆ ಪಂಚಾಯತ್ ಗೆ ವರ್ಗಾಯಿಸಿ ಆದೇಶ ಹೊರಡಿಸಲಾಗಿತ್ತು.


ಬಳಿಕ ವಿಧಾನ ಸಭಾ ಚುನಾವಣೆಯ ಸಂದರ್ಭದಲ್ಲಿ ಸಿಬ್ಬಂದಿ ಕೊರತೆಯಿರುವ ಕಾರಣದಿಂದ ಅವರನ್ನು ಆಲೆಟ್ಟಿ ಪಂಚಾಯತ್ ನಲ್ಲಿಯೇ ಕರ್ತವ್ಯ ನಿರ್ವಹಿಸುವಂತೆ ಇ.ಒ ರವರು ಸೂಚಿಸಿದ್ದರು. ಅದರಂತೆಯೇ ಸೃಜನ್ ರವರು ಕರ್ತವ್ಯ ನಿರ್ವಹಿಸುತ್ತಿದ್ದರು.


ಇದೀಗ ಅವರ
ವರ್ಗಾವಣೆ ಆದೇಶವನ್ನು ‌ರದ್ದುಗೊಳಿಸಿ ಮೂಲಸ್ಥಾನವಾದ ಆಲೆಟ್ಟಿ ಗ್ರಾಮ ಪಂಚಾಯತ್ ನಲ್ಲಿ ಗ್ರೇಡ್ 1 ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುವಂತೆ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರು ಆದೇಶ ಪತ್ರ ಕಳುಹಿಸಿರುವುದಾಗಿ ತಿಳಿದುಬಂದಿದೆ.