ಜೂನ್ 17 ರಂದು ಸುಳ್ಯ ತಾಲೂಕು ಮತ್ತು ಕಡಬ ತಾಲೂಕುಗಳ ಗ್ರಾ.ಪಂ. ಅಧ್ಯಕ್ಷ, ಉಪಾಧ್ಯಕ್ಷತೆಗೆ ಮೀಸಲಾತಿ ನಿಗದಿ

0

ಗ್ರಾಮ ಪಂಚಾಯತ್ ಅಧ್ಯಕ್ಷ ಉಪಾಧ್ಯಕ್ಷರ ಪ್ರಥಮ ಎರಡೂವರೆ ವರ್ಷಗಳ ಅವಧಿ ಆಗಸ್ಟ್ ತಿಂಗಳಲ್ಲಿ ಮುಕ್ತಾಯಗೊಳ್ಳಲಿದ್ದು, ಮುಂದಿನ ಅವಧಿಯ ಅಧ್ಯಕ್ಷ ಉಪಾಧ್ಯಕ್ಷತೆಗೆ ಮೀಸಲಾತಿ ನಿಗದಿಗೆ ದಿನಾಂಕ ನಿಗದಿಗೊಳಿಸಲಾಗಿದೆ.


ಪುತ್ತೂರು ತಾಲೂಕಿನ ಗ್ರಾ.ಪಂ.ಗಳ ಅಧ್ಯಕ್ಷ ಉಪಾಧ್ಯಕ್ಷತೆಗೆ ಜೂನ್ 16 ರಂದು ಮೀಸಲಾತಿ ನಿಗದಿಯಾಗಲಿದ್ದು, ಸುಳ್ಯ ತಾಲೂಕು ಮತ್ತು ಕಡಬ ತಾಲೂಕುಗಳ ಗ್ರಾ.ಪಂ.ಗಳ ಅಧ್ಯಕ್ಷ ಉಪಾಧ್ಯಕ್ಷತೆಗೆ ಮೀಸಲಾತಿ ನಿಗದಿ ಜೂನ್ 17 ರಂದು ಸುಳ್ಯ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆಯಲಿರುವುದಾಗಿ ತಿಳಿದುಬಂದಿದೆ.