ಉಬರಡ್ಕ : ಯುವಕ ಮಂಡಲದ ವಾರ್ಷಿಕ ಮಹಾಸಭೆ

0

ಅಧ್ಯಕ್ಷರಾಗಿ ದೇವಪ್ಪ ಆಚಾರ್ಯ ಕಲ್ಚಾರ್, ಪ್ರಧಾನಕಾರ್ಯದರ್ಶಿ ಲೋಕೇಶ್ ಪಟ್ರುಕೋಡಿ, ಕೋಶಾಧಿಕಾರಿ ಮನೋಹರ್ ಕಾಚೇಲು

ಉಬರಡ್ಕ ಮಿತ್ತೂರು ಯುವಕಮಂಡಲದ ವಾರ್ಷಿಕ ಮಹಾಸಭೆಯು ಜೂನ್ 4 ರಂದು ಅಧ್ಯಕ್ಷರಾದ ವಿಜಯಕುಮಾರ್ ಉಬರಡ್ಕ ರವರ ಅಧ್ಯಕ್ಷತೆಯಲ್ಲಿ ಜರುಗಿತು.


ಪ್ರದಾನಕಾರ್ಯದರ್ಶಿ ಸಂದೀಪ್ ರೈ ಉಬರಡ್ಕವರದಿ ವಾಚಿಸಿದರು. ಕೋಶಾಧಿಕಾರಿ ಮನೋಹರ್ ಕಾಚೇಲು ಲೆಕ್ಕಪತ್ರ ಮಂಡಿಸಿದರು.
ಇತ್ತೀಚೆಗೆ ಸುವರ್ಣಮಹೋತ್ಸವವನ್ನು ಆಚರಿಸಿದ ಯುವಕಮಂಡಲದ 2023- 24 ನೇ ಸಾಲಿನ ಪದಾಧಿಕಾರಿಗಳನ್ನು ಈ ಸಂದರ್ಭದಲ್ಲಿ ಆಯ್ಕೆಮಾಡಲಾಯಿತು.


ಅಧ್ಯಕ್ಷರಾಗಿ ದೇವಪ್ಪ ಆಚಾರ್ಯ ಕಲ್ಚಾರ್. ಪ್ರಧಾನಕಾರ್ಯಧರ್ಶಿ ಯಾಗಿ ಲೋಕೇಶ್ ಪಟ್ರುಕೋಡಿ ಕೋಶಾಧಿಕಾರಿಯಾಗಿ ಮನೋಹರ್ ಕಾಚೇಲು ರವರನ್ನು ಆಯ್ಕೆ ಮಾಡಲಾಯಿತು


ಉಪಾಧ್ಯಕ್ಷರಾಗಿ ಉಮೇಶ್ ಆಚಾರ್ಯ ನೀರಬಿದಿರೆ. ಜತೆಕಾರ್ಯದರ್ಶಿಯಾಗಿ ರವಿರಾಜ್ ರಾವ್ ಕಂಬಳಿಮೂಲೆ. ಕ್ರೀಡಾಕಾರ್ಯದರ್ಶಿಯಾಗಿ ಸಂದೀಪ್ ರೈ ಉಬರಡ್ಕ. ಜತೆಕ್ರೀಡಾಕಾರ್ಯದರ್ಶಿಯಾಗಿ ಪ್ರವೀಣ್ ಕ್ರಾಸ್ತ ಮಾಣಿಬೆಟ್ಟು. ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ರಕ್ಷಿತ್ ಉಬರಡ್ಕ . ಸಾಂಸ್ಕೃತಿಕ ಜತೆಕಾರ್ಯದರ್ಶಿಯಾಗಿ ಗಣೇಶ್ ಭಟ್ ನೆಕ್ಕಿಲ ರವರನ್ನು ಆಯ್ಕೆಮಾಡಲಾಯಿತು

ನಿರ್ದೇಶಕರುಗಳಾಗಿ ರಮೇಶ್ ಉಬರಡ್ಕ.ಪ್ರವೀಣ್ ಉಬರಡ್ಕ.ಅಶ್ವಥ್ ನಾರ್ಕೋಡು.ದೀಪಕ್ ಪಟ್ರುಕೊಡಿ ವಿನಯ್ ಯಾವಟೆ.ಧನಂಜಯ ಭರ್ಜೆರಿಗುಂಡಿ. ಗಣೇಶ್ ಬೈತಡ್ಕ ಪುನೀತ್ ಪೈಕ. ಯತಿಂದ್ರ ಪೈಕ.ಇವರನ್ನು ಆಯ್ಕೆ ಮಾಡಲಾಯಿತು ಗೌರವಧ್ಯಕ್ಷರಾಗಿ ವಿಜಯಕುಮಾರ್ ಉಬರಡ್ಕ. ಗೌರವಸಲಹೆ ಗಾರರಾಗಿ ಹರೀಶ್ ಉಬರಡ್ಕ. ರಾಜೇಶ್ ಭಟ್ ನೆಕ್ಕಿಲ. ಗಂಗಾಧರ ಭರ್ಜೆರಿಗುಂಡಿ ರಾಜೇಶ್ ರೈ ಉಬರಡ್ಕ ರವರನ್ನು ಆಯ್ಕೆ ಮಾಡಲಾಯಿತು.

ಯುವಜನ ಸಂಯುಕ್ತ ಮಂಡಳಿಯ ಉಪಾಧ್ಯಕ್ಷರಾದ ವಿಜಯಕುಮಾರ್ ಉಬರಡ್ಕ ಪ್ರತಿಜ್ಞಾ ವಿಧಿ ಬೋದಿಸಿದರು. ಪ್ರವೀಣ್ ಉಬರಡ್ಕ ಸ್ವಾಗತಿಸಿದರು. ಲೋಕೇಶ್ ಪಟ್ರಕೋಡಿ ವಂದಿಸಿದರು