ಸುಳ್ಯ ಸಿಡಿಪಿಒ ಆಗಿ ಶೈಲಜಾ ದಿನೇಶ್‌ ಕುಕ್ಕುಜಡ್ಕರಿಗೆ ಪ್ರಭಾರ

0


ಸುಳ್ಯ ಸಿಡಿಪಿಒ ಆಗಿ ಹಿರಿಯ ಮೇಲ್ವಿಚಾರಕಿ ಶೈಲಜಾ ದಿನೇಶ್‌ ಕುಕ್ಕುಜಡ್ಕರಿಗೆ ಪ್ರಭಾರ ವಹಿಸಲಾಗಿದೆ. 2004 ರಲ್ಲಿ ಪುತ್ತೂರು ಸಿಡಿಪಿಒ ಕಚೇರಿಯಲ್ಲಿ ಮೇಲ್ವಿಚಾರಕಿಯಾಗಿ ಸೇವೆಗೆ ಸೇರಿದ ಇವರು ೨೦೦೯ರಲಲ್ಲಿ ಸುಳ್ಯ ಸಿಡಿಪಿಒ ಕಚೇರಿಗೆ ವರ್ಗಾವಣೆಗೊಂಡು ಬಂದರು.


2022 ರಲ್ಲಿ ಹಿರಿಯ ಮೇಲ್ವಿಚಾರಕರಾಗಿ ಪದೋನ್ನತಿ ಪಡೆದ ಇವರು ಮಂಗಳೂರು ಗ್ರಾಮಾಂತರ ಸಿಡಿಪಿಒ ಕಚೇರಿಗೆ ವರ್ಗಾವಣೆಗೊಂಡರು. ಇದೀಗ ಸುಳ್ಯದಲ್ಲಿ ಡೆಪ್ಯಟೇಶನ್‌ನಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಸುಳ್ಯದ ಸಿಡಿಪಿಒ ಆಗಿದ್ದ ರಶ್ಮಿ ನೆಕ್ರಾಜೆಯವರಿಗೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾಗಿ ಮುಂಭಡ್ತಿಯಾಗಿದ್ದು, ಅವರು ಮಂಗಳೂರಿಗೆ ವರ್ಗಾವಣೆಯಾಗಿದ್ದಾರೆ.


ಇದರಿಂದ ಸುಳ್ಯದ ಸಿಡಿಪಿಒ ಹುದ್ದೆ ಖಾಲಿಯಾಗಿತ್ತು. ಇದೀಗ ಹಿರಿಯ ಮೇಲ್ವಿಚಾರಕಿಯಾಗಿರುವ ಶೈಲಜಾ ದಿನೇಶ್‌ ಕುಕ್ಕುಜಡ್ಕರವರಿಗೆ ಪ್ರಭಾರ ವಹಿಸಲಾಗಿದೆ.