ಗುತ್ತಿಗಾರು: ಪೊಷಕರ ಸಭೆ

0


ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಗುತ್ತಿಗಾರು ಇಲ್ಲಿ ಈ ಶೈಕ್ಷಣಿಕ ವರ್ಷ ವರ್ಷದ ಪೋಷಕರ ಸಭೆ ಇಂದು ಶಾಲಾ ಆವರಣದಲ್ಲಿ ನಡೆಯಿತು. ಸಭಾಧ್ಯಕ್ಷತೆಯನ್ನು ವೆಂಕಟ್ ದಂಬೆಕೋಡಿ ವಹಿಸಿದ್ದರು.

ಸಭೆಯಲ್ಲಿ ಮುಖ್ಯ ಶಿಕ್ಷಕಿ ಉಮಾವತಿಯವರು ಈ ಶೈಕ್ಷಣಿಕ ವರ್ಷದ ಬಗ್ಗೆ ಪೋಷಕರಿಗೆ ಮಾಹಿತಿ ನೀಡಿದರು. ವೇದಿಕೆಯಲ್ಲಿ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ದಯಾನಂದ ಮುತ್ಲಾಜೆ ಉಪಸಿತರಿದ್ದರು.


ಆಂಗ್ಲ ಮಾಧ್ಯಮ ಶಿಕ್ಷಕ ಶಶಿಧರ ಮಾವಿನಕಟ್ಟೆ ಅವರು ಕಾರ್ಯಕ್ರಮ ನಿರೂಪಿಸಿದರು. ಸಭೆಯಲ್ಲಿ ಎಲ್ಲಾ ತರಗತಿಯ ಮಕ್ಕಳ ಪೋಷಕರು ಭಾಗವಹಿಸಿದ್ದರು. ಶಿಕ್ಷಕ ಲೋಕೇಶ್ ವಂದಿಸಿದರು.
(ವರದಿ : ಡಿ.ಹೆಚ್)