ಎಸ್.ಎಸ್.ಎಲ್.ಸಿ. ಮರುಮೌಲ್ಯಮಾಪನ : ಸುಳ್ಯ ರೋಟರಿಯ ಸನಿಹ ಶೆಟ್ಟಿ ರಾಜ್ಯಕ್ಕೆ ಚತುರ್ಥ

0

ಸುಳ್ಯ ರೋಟರಿ ವಿದ್ಯಾಸಂಸ್ಥೆಯ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿ ಸನಿಹ ಶೆಟ್ಟಿ ವಾರ್ಷಿಕ ಪರೀಕ್ಷೆಯಲ್ಲಿ ೬೨೨ ಅಂಕ ಪಡೆದು ರಾಜ್ಯಕ್ಕೆ ನಾಲ್ಕನೇ ಸ್ಥಾನಿಯಾಗಿದ್ದಾರೆ.
ತಿಂಗಳ ಹಿಂದೆ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟಗೊಂಡಾಗ ಸನಿಹಾ ಶೆಟ್ಟಿಗೆ ೬೨೦ ಅಂಕ ಲಭಿಸಿತ್ತು. ಅವರು ಇಂಗ್ಲೀಷ್ ಮತ್ತು ಸಮಾಜ ವಿಜ್ಞಾನ ಪ್ರಶ್ನೆ ಪತ್ರಿಕೆಯನ್ನು ಮರು ಮೌಲ್ಯಮಾಪನಗೊಳಪಡಿಸಿದಾಗ ಎರಡರಲ್ಲೂ ತಲಾ ಒಂದು ಅಂಕ ಹೆಚ್ಚಳವಾಗಿ ೬೨೨ ಲಭಿಸಿತು. ಇದೀಗ ರಾಜ್ಯಕ್ಕೆ ಆಕೆ ನಾಲ್ಕನೇ ಸ್ಥಾನಿಯಾಗಿದ್ದಾರೆ.

ಈಕೆ ಸುಳ್ಯ ಸಿ.ಎ. ಬ್ಯಾಂಕ್ ಸಮೀಪದ ನಿವಾಸಿ ಚಂದ್ರಕಾಂತ್ ಶೆಟ್ಟಿ ಹಾಗೂ ಉಷಾ ಸಿ ಶೆಟ್ಟಿ ದಂಪತಿಯ ಪುತ್ರಿ.