ಅಡ್ಕಾರು: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ : ಜಖಂ

0

ಬಾರೀ ಮಳೆಯಿಂದಾಗಿ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾದ ಘಟನೆ ಜಾಲ್ಸೂರು ಗ್ರಾಮದ ಅಡ್ಕಾರು ಅಯ್ಯಪ್ಪ ಮಂದಿರದ ಬಳಿ ಜೂ.9ರಂದು ಸಂಜೆ ಸಂಭವಿಸಿದೆ.

ಕೇರಳದ ವಯನಾಡು ನಿವಾಸಿಯೋರ್ವರು ದಂಪತಿ ಹಾಗೂ ತಮ್ಮ ಮಕ್ಕಳೊಂದಿಗೆ ಮಂಗಳೂರಿನಿಂದ ಮಡಿಕೇರಿಗೆ ತಮ್ಮ ವ್ಯಾಗನಾರ್ ಕಾರಿನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಬಾರೀ ಮಳೆಯಿಂದಾಗಿ ಕಾರು ಅಡ್ಕಾರಿನ ಅಯ್ಯಪ್ಪ ಮಂದಿರದ ಬಳಿ ಚಾಲಕನ ನಿಯಂತ್ರಣ ಕಳೆದು ಪಲ್ಟಿಯಾಯಿತು.


ಪರಿಣಾಮವಾಗಿ ಕಾರಿನ ಹಿಂಬದಿ ಸೀಟಿನಲ್ಲಿ ಕುಳಿತಿದ್ದ ಮಕ್ಕಳಿಗೆ ಸಣ್ಣಪುಟ್ಟ ಗಾಯಗೊಂಡರು. ತಕ್ಷಣ ಸ್ಥಳೀಯ ನಿವಾಸಿ, ಎ.ಅರ್. ಬಾಬು, ಟೈಲರ್ ಚಂದ್ರಶೇಖರ ಅಡ್ಕಾರು ಮತ್ತಿತರರು ಸೇರಿ ಗಾಯಗೊಂಡವರನ್ನು ಉಪಚರಿಸಿದರು.


ಬಳಿಕ ಸುಳ್ಯದ ಕೆವಿಜಿ ಆಸ್ಲತ್ರೆಯ ಅಂಬ್ಯುಲೆನ್ಸ್ ಮೂಲಕ ಕೆವಿಜಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಿದರೆಂದು ತಿಳಿದುಬಂದಿದೆ.