ಉಬರಡ್ಕದಲ್ಲಿ ಯಕ್ಷ ದಶ ಸಂಭ್ರಮ : ಆಮಂತ್ರಣ ಬಿಡುಗಡೆ

0


ಉಬರಡ್ಕ ಮಿತ್ತೂರಿನ ಶ್ರೀ ನರಸಿಂಹ ಶಾಸ್ತಾವು ಮಕ್ಕಳ ಯಕ್ಷ ಕಲಾ ಸಂಘ ಆರಂಭಗೊಂಡು 10 ವರ್ಷ ತುಂಬಿರುವ ಹಿನ್ನಲೆಯಲ್ಲಿ ನರಸಿಂಹ ಶಾಸ್ತಾವು ಮಕ್ಕಳ ಯಕ್ಷ ಕಲಾ ಸಂಘ, ದುಗಲಡ್ಕ ಶ್ರೀ ದುಗ್ಗಲಾಯ ಮಕ್ಕಳ ಯಕ್ಷ ಕಲಾ ಸಂಘ ಇವುಗಳ ಜಂಟಿ ಆಶ್ರಯದಲ್ಲಿ ಜೂ. 24 ರಂದು ಉಬರಡ್ಕ ನರಸಿಂಹ ಶಾಸ್ತಾವು ದೇವಸ್ಥಾನದ ಸಭಾಭವನದಲ್ಲಿ ನಡೆಯಲಿರುವ ವಿಶೇಷ ರಂಗಪೂಜೆ, ಯಕ್ಷದಶ ಸಂಭ್ರಮ ಹಾಗೂ ಸನ್ಮಾನ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ಇಂದು ಉಬರಡ್ಕ ದೇವಸ್ಥಾನದಲ್ಲಿ ನಡೆಯಿತು.


ಯಕ್ಷ ಗುರುಗಳಾದ ಬಾಲಕೃಷ್ಣ ನಾಯರ್ ನೀರಬಿದಿರೆ, ನರಸಿಂಹ ಶಾಸ್ತಾವು ಮಕ್ಕಳ ಯಕ್ಷ ಕಲಾ ಸಂಘದ ಅಧ್ಯಕ್ಷೆ ಶ್ರೀಮತಿ ರಾಜೇಶ್ವರಿ ಕಾಡುತೋಟ, ಯಕ್ಷೆತ್ಸವದ ನಿಕಟ ಪೂವಾಧ್ಯಕ್ಷ ರಾಘವ ರಾವ್ ಬಿ., ದಿವಾಕರ ಶೆಟ್ಟಿಹಿತ್ಲು, ಗಿರೀಶ್ ಕಕ್ಕೆಬೆಟ್ಟು, ಉದಯಕುಮಾರ್ ಕೆ., ಜಯರಾಜ್ ಪಿ.ವಿ., ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.