ಬೆಳ್ಳಾರೆ: ಯಾದವ ಸಭಾ ವತಿಯಿಂದ ವಿದ್ಯಾರ್ಥಿಗಳಿಗೆ ಬರೆಯುವ ಪುಸ್ತಕ ವಿತರಣೆ

0


ಬೆಳ್ಳಾರೆ ಯಾದವ ಸಭಾ ಪ್ರಾದೇಶಿಕ ಸಮಿತಿ ವತಿಯಿಂದ ವಿದ್ಯಾರ್ಥಿಗಳಿಗೆ ಬರೆಯುವ ಪುಸ್ತಕ ವಿತರಣಾ ಕಾರ್ಯಕ್ರಮವು ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ಜೂ.11ರಂದು ಬೆಳಿಗ್ಗೆ ಜರುಗಿತು.


ಬೆಳ್ಳಾರೆ ಯಾದವ ಸಭಾ ಪ್ರಾದೇಶಿಕ ಸಮಿತಿಯ ಅಧ್ಯಕ್ಷ ಆನಂದ ಉಮಿಕ್ಕಳ ಅವರು ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಸುಮಾರು ಮೂವತ್ತೇಳು ಮಂದಿ ವಿದ್ಯಾರ್ಥಿಗಳಿಗೆ ಬರೆಯುವ ಪುಸ್ತಕವನ್ನು ಕೊಡುಗೆಯಾಗಿ ವಿತರಿಸಲಾಯಿತು.


ಯಾದವ ಸಭಾ ಕೇಂದ್ರ ಸಮಿತಿ ಅಧ್ಯಕ್ಷ ಎ.ಕೆ‌. ಮಣಿಯಾಣಿ ಬೆಳ್ಳಾರೆ ಅವರು ವಿದ್ಯಾರ್ಥಿಗಳಿಗೆ ಬರೆಯುವ ಪುಸ್ತಕವನ್ನು ವಿತರಿಸಿದರು.
ಮುಖ್ಯ ಅತಿಥಿಗಳಾಗಿ ಸುಳ್ಯ ತಾಲೂಕು ಸಮಿತಿ ಅಧ್ಯಕ್ಷ ಕರುಣಾಕರ ಹಾಸ್ಪಾರೆ, ಯಾದವ ಸಭಾ ಸುಳ್ಯ ತಾಲೂಕು ಸಮಿತಿ ಕಾರ್ಯದರ್ಶಿ ಕೃಷ್ಣ ಬೆಟ್ಟ, ಕೋಶಾಧಿಕಾರಿ ನಾರಾಯಣ ಮಣಿಯಾಣಿ ಬೀಡು, ಸುಳ್ಯ ತಾಲೂಕು ಯಾದವ ಸಭಾ ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ರಾಜೀವಿ ಪರ್ಲಿಕಜೆ ಉಪಸ್ಥಿತರಿದ್ದರು.


ತನುಶ್ರೀ ಪಡ್ಪು ಪ್ರಾರ್ಥಿಸಿ, ಚಂದ್ರಹಾಸ ಪಡ್ಪು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಶಶಿಧರ ಮಣಿಯಾಣಿ ಬೀಡು ವಂದಿಸಿದರು.