ಚೊಕ್ಕಾಡಿ‌ ಮಯೂರಿ ಯುವತಿ ಮಂಡಲದಿಂದ ವನಮಹೋತ್ಸವ

0

ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ಮಯೂರಿ ಯುವತಿ ಮಂಡಲ ಚೊಕ್ಕಾಡಿ ಇದರ ಆಶ್ರಯದಲ್ಲಿ ವನಮಹೋತ್ಸವ ಕಾರ್ಯಕ್ರಮವನ್ನು ಚೊಕ್ಕಾಡಿ ಬಾಲಗೋಕುಲದ ಮಕ್ಕಳಿಗೆ ಗಿಡ ವಿತರಿಸುವ ಮೂಲಕ ಹಾಗೂ ಚೊಕ್ಕಾಡಿ ವಠಾರದಲ್ಲಿ ಗಿಡ ನೆಡುವ ಮೂಲಕ ನಡೆಯಿತು.

ಕಾರ್ಯಕ್ರಮವನ್ನು ಚೊಕ್ಕಾಡಿ ಸೊಸೈಟಿ ಅಧ್ಯಕ್ಷ ಕೇಶವ ಗೌಡ ಕರ್ಮಜೆ ಅವರು ದೀಪ ಬೆಳಗುವುದರ ಮೂಲಕ ಉದ್ಘಾಟಿಸಿದರು.
ಮುಖ್ಯ ಅತಿಥಿಯಾಗಿ ಬಾಲಗೋಕುಲದ ಮಾತಾಜಿ ಪಾರ್ವತಿ ನೇನಾರು ಶುಭಹಾರೈಸಿದರು.
ಮಯೂರಿ ಯುವತಿ ಮಂಡಲದ ಅಧ್ಯಕ್ಷರು ಪೂರ್ಣಿಮಾ ಚಿಕ್ಕಿನಡ್ಕ ಉಪಸ್ಥಿತರಿದ್ದರು.

ಸನ್ನಿಧಿ ಪೂಜಾರಿಮನೆ ಪ್ರಾರ್ಥಿಸಿದರು. ಹೇಮಾಲತಾ ಪಡ್ಪು‌ ಸ್ವಾಗತಿಸಿದರು. ಸ್ವಾತಿ ಪದವು ವಂದಿಸಿದರು. ಪರಿಸರ ಗೀತೆಯನ್ನು ಸನ್ನಿದಿ, ಗೀತಾ, ಯೋಗಿನಿ, ಸೀತಾಲಕ್ಷ್ಮಿ ಹಾಡಿದರು. ಉಷಾ ಪಡ್ಪು‌ ಕಾರ್ಯಕ್ರಮ ನಿರೂಪಿಸಿದರು.

ಈ ಕಾರ್ಯಕ್ರಮ ದಲ್ಲಿ ಮಯೂರಿ ಯುವತಿ ಮಂಡಲದ ಸದಸ್ಯರು, ಬಾಲಗೋಕುಲದ ಪುಟಾಣಿಗಳು ಮತ್ತು ಪೋಷಕರು ಭಾಗವಹಿಸಿದರು.