ಜೂ.16 : ಅಜ್ಜಾವರ ಮೇನಾಲ ಮಖಾಂ ಉರೂಸ್ ಪ್ರಾರಂಭ

0

ಜೂ.20: ಉರೂಸ್ ಸಮಾರೋಪ ಹಾಗೂ ಸೌಹಾರ್ದ ಸಂಗಮ


ಇತಿಹಾಸ ಪ್ರಸಿದ್ಧ ಅಜ್ಜಾವರ ಮೇನಾಲ ದರ್ಗಾ ಶರೀಫ್ ಉರೂಸ್ ಕಾರ್ಯಕ್ರಮ ಹಾಗೂ 5 ದಿನಗಳ ಧಾರ್ಮಿಕ ಪ್ರವಚನ ಕಾರ್ಯಕ್ರಮ ಅಜ್ಜಾವರ ಮೇನಾಲ ಮಖಾಂ ವಠಾರದಲ್ಲಿ‌ ನಡೆಯಲಿದೆ.


ಜೂ.16 ರಂದು ಉರೂಸ್ ಸಮಾರಂಭವನ್ನು ಸಯ್ಯದ್ ಅಹಮ್ಮದ್ ಪುಕೋಯ ತಂಙಳ್ ಪುತ್ತೂರು ಉದ್ಘಾಟಿಸಲಿದ್ದಾರೆ.


ಜೂ.17 ರಂದು ಅಬ್ದುಲ್‌ ಖಾದರ್ ಮುನವ್ವರಿ ಧಾರ್ಮಿಕ ಪ್ರಬಾಷಣ ಮಾಡಲಿದ್ದಾರೆ.
ಜೂ.18 ಮಖಾಂ ಅಲಂಕಾರ ಮತ್ತು ಝಿಕ್ರ್ ಹಲ್ಕ ಕಾರ್ಯಕ್ರಮ ನಡೆಯಲಿದೆ.ಅಬ್ದುಲ್‌ ಸಲೀಂ ವಾಫಿ ಮಟನ್ನೂರ್ ಮುಖ್ಯ ಪ್ರಭಾಷಣ ಮಾಡಲಿದ್ದಾರೆ.
ಜೂ.19 ರಂದು ಹನೀಫ್ ನಿಝಾಮಿ ಧಾರ್ಮಿಕ ಪ್ರಭಾಷಣ ಮಾಡಲಿದ್ದಾರೆ.


ಜೂ.20 ಉರೂಸ್ ಸಮಾರೋಪ ಹಾಗೂ ಸೌಹಾರ್ದ ಸಮಾರಂಭ ಕಾರ್ಯಕ್ರಮ ನಡೆಯಲಿದೆ.
ಸಯ್ಯದ್ ಝೈನುಲ್ ಅಬಿದಿನ್ ತಂಙಳ್ ದುಗಲಡ್ಕ ದುವಾಶಿರ್ವಚನ ನೀಡಲಿದ್ದಾರೆ.


ಶಮೀರ್ ದಾರಿಮಿ ಕೊಲ್ಲಂ ಮುಖ್ಯ ಪ್ರಬಾಷಣ ಮಾಡಲಿದ್ದಾರೆ ಸಮಾರೋಪ ಸಮಾರಂಭದ ಕೊನೆಯ ಅನ್ನದಾನ ವಿತರಣೆ ನಡೆಯಲಿದೆ ಎಂದು ಅಜ್ಜಾವರ ಮೇನಾಲ ಜಮಾಯತ್ ಕಮಿಟಿಯವರು ತಿಳಿಸಿದ್ದಾರೆ.