ಸುಬ್ರಹ್ಮಣ್ಯ ರೋಟರಿ ಕ್ಲಬ್ ಗೆ ಪ್ಲಾಟಿನಮ್ ಕ್ಲಬ್ ಅವಾರ್ಡ್‌

0

ರೋಟರಿ ಕ್ಲಬ್ ಸುಬ್ರಹ್ಮಣ್ಯಕ್ಕೆ ಪ್ಲಾಟಿನಮ್ ಕ್ಲಬ್ ಅವಾರ್ಡ್‌ ಪ್ರಶಸ್ತಿ ಯನ್ನು ಜೂ.11 ರಂದು ಕೊಡಮಾಡಲಾಯಿತು.

ಮಂಗಳೂರಿನ ಸೈಂಟ್ ಸೆಬಾಸ್ಟಿಯನ್ ಹಾಲ್ ನಲ್ಲಿ ನಡೆದ ರೋಟರಿ ಜಿಲ್ಲೆ ಜಿಲ್ಲಾ ಪ್ರಶಸ್ತಿ ಪ್ರಧಾನ ಸಮಾರಂಭ ನಡರದಿದ್ದು, ರೋಟರಿ ಕ್ಲಬ್ ಸುಬ್ರಹ್ಮಣ್ಯಕ್ಕೆ ವಿದ್ಯಾಸಿರಿ, ಜಲಸಿರಿ, ಆರೋಗ್ಯ ಸಿರಿ, ಯೋಜನೆಗಳಲ್ಲಿ ವಿಶಿಷ್ಟ ಸಾಧನೆಯನ್ನು ಗುರುತಿಸಿ ಪ್ಲಾಟಿನಮ್ ಕ್ಲಬ್ ಅವಾರ್ಡನ್ನು ಪ್ರಧಾನ ಮಾಡಲಾಯಿತು . ಹಾಗೂ ಸುಬ್ರಹ್ಮಣ್ಯದ ಪರಿಸರದಲ್ಲಿ ಕುಡಿಯುವ ನೀರಿನ ಯೋಜನೆಯನ್ನು ಅನುಷ್ಠಾನ ಗೊಳಿಸಿದಕ್ಕಾಗಿ ವಿಶೇಷವಾದ ಯೋಜನಾ ಪ್ರಶಸ್ತಿಯನ್ನು ಕೂಡ ಸುಬ್ರಹ್ಮಣ್ಯ ರೋಟರಿ ಕ್ಲಬ್ಬಿಗೆ ನೀಡಲಾಗಿದೆ .

ಗವರ್ನರ್ ಪ್ರಕಾಶ್ ಕಾರಂತ್ ಅವರು ತಂಡ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವನ್ನು ನೆರವೇರಿಸಿದರು.
ಈ ಸಂದರ್ಭ ಸುಬ್ರಹ್ಮಣ್ಯ ಕ್ಲಬ್ಬ್ ನ ಅಧ್ಯಕ್ಷರಾದ ಗೋಪಾಲ ಎಣ್ಣೆ ಮಜಲು, ಅಸಿಸ್ಟೆಂಟ್ ಗವರ್ನರ್ ಶಿವರಾಮ ಏನೆಕಲ್ಲು, ಕಾರ್ಯದರ್ಶಿ ರವಿ ಕಕ್ಕೆಪದವು, ಖಜಾಂಜಿ ಚಂದ್ರಶೇಖರ ನಾಯರ್, ಪೂರ್ವ ಅಧ್ಯಕ್ಷರುಗಳಾದ ಮಾಯಿಲಪ್ಪ ಸಂಕೇಶ, ಬಾಲಕೃಷ್ಣ ಪೈ, ಎಚ್ ಎಲ್ ವೆಂಕಟೇಶ್, ವಿಜಯಕುಮಾರ, ನಿಯೋಜಿತ ಅಧ್ಯಕ್ಷ ಪ್ರಶಾಂತ್ ಕೋಡಿಬೈಲು, ನಿಯೋಜಿತ ಕಾರ್ಯದರ್ಶಿ ಮೋಹನ್ ದಾಸ್ ಎಣ್ಣೆಮಜಲು ಮತ್ತಿತರರು ಉಪಸಿತರಿದ್ದರು.