ಜೆಸಿಐ ಸುಳ್ಯ ಪಯಸ್ವಿನಿ ಗೆ ವಲಯ ಮಟ್ಟದ ಪ್ರಶಸ್ತಿ

0

ಜೆಸಿಐ ಭಾರತ ವಲಯ 15 ರ ಮಧ್ಯಂತರ ಸಮ್ಮೇಳನ ಜೂ.11ರಂದು ಬಂಟ್ವಾಳದ ಬೆಂಜನಪದವು ಶುಭಲಕ್ಷ್ಮಿ ಆಡಿಟೋರಿಯಂ ನಲ್ಲಿ ನಡೆಯಿತು.

ಜೆಸಿಐ ಜೋಡುಮಾರ್ಗ ನೇತ್ರಾವತಿಯ ಆತಿಥ್ಯ ದಲ್ಲಿ ನಡೆದ ಈ ನಿಲುಮೆ ಮಧ್ಯಂತರ ಸಮ್ಮೇಳನ- 2023 ರಲ್ಲಿ ಜೆಸಿಐ ಸುಳ್ಯ ಪಯಸ್ವಿನಿ ಘಟಕವು ರಾಷ್ಟೀಯ ಯುವ ದಿನಾಚರಣೆಯ ಸಂಭ್ರಮ, ಗಣರಾಜ್ಯೋತ್ಸವ ಸಂಭ್ರಮಾಚರಣೆ, ದಾನ್ ಯುಗಾದಿ ಸಂಭ್ರಮ,ವಿಶ್ವ ಮಹಿಳಾ ದಿನಾಚರಣೆ,ವಿಶ್ವ ಪರಿಸರ ದಿನಾಚರಣೆ , ಬೇಸಿಗೆ ಶಿಬಿರ ಆಯೋಜನೆ ಇತ್ಯಾದಿ ಕಾರ್ಯಕ್ರಮಗಳಿಗೆ ವಲಯ ಮಟ್ಟದಲ್ಲಿ ಗೋಲ್ಡನ್ ಲೋ ಪ್ರಶಸ್ತಿಗೆ ಭಾಜನವಾಯಿತು.

ಅಲ್ಲದೇ ಪ್ರಾಂತ್ಯ ಮಟ್ಟದಲ್ಲಿ ಔಟ್ ಸ್ಟ್ಯಾಂಡಿಂಗ್ ಸ್ಪೆಷಲ್ ಪ್ರಾಜೆಕ್ಟ್ ಗಾಗಿ ವಿನ್ನರ್ ಹಾಗೂ ಔಟ್ ಸ್ಟ್ಯಾಂಡಿಂಗ್ ಲೋ ಆರ್ಗಾನಿಸಷನ್ ನಲ್ಲಿ ರನ್ನರ್ ಪ್ರಶಸ್ತಿ ಯೂ ಮೂಡಿಗೆರಿಸಿಕೊಂಡಿತು.