ಸುಳ್ಯ ನಗರದಲ್ಲಿ ಹೆಚ್ಚುತ್ತಿರುವ ಟ್ರಾಫಿಕ್ ಜಾಮ್

0

ನಾಗರಿಕರಿಗೆ, ವಾಹನ ಪ್ರಯಾಣಿಕರಿಗೆ ಸಮಸ್ಯೆ

ಗಮನಹರಿಸಬೇಕಿದೆ ಪೊಲೀಸ್ ಇಲಾಖೆ

ಇತ್ತೀಚಿನ ದಿನಗಳಲ್ಲಿ ಸುಳ್ಯದಲ್ಲಿ ವಾಹನ ದಟ್ಟಣೆ ಹೆಚ್ಚಾಗಿದ್ದು ಇದರ ಜೊತೆಗೆ ಟ್ರಾಫಿಕ್ ಜಾಮ್ ಆಗುತ್ತಿದ್ದು ನಾಗರಿಕರಿಗೆ ಸಮಸ್ಯೆಯುಂಟಾಗಿದೆ.

ಸುಳ್ಯದಲ್ಲಿ ಹಾದು ಹೋಗುವ ಮಂಗಳೂರು ಮಡಿಕೇರಿ ಸಂಪರ್ಕವಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಆಗಾಗ ಆಗುತ್ತಿದ್ದು ಪ್ರಯಾಣಿಕರು ರೋಸಿ ಹೋಗಿದ್ದಾರೆ.

ಸುಳ್ಯದಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕವಿರುವ ಶ್ರೀರಾಮ್ ಪೇಟೆ ರಸ್ತೆ ಹಾಗೂ ಜ್ಯೋತಿ ಸರ್ಕಲ್ ರಸ್ತೆಯಲ್ಲಿ ಅಧಿಕವಾಗಿ ಟ್ರಾಫಿಕ್ ಜಾಮ್ ಆಗುತ್ತಿದ್ದು ಜನರು ವಿದ್ಯಾರ್ಥಿಗಳು ಓಡಾಡಲು ಕಷ್ಟ ಪಡುವಂತಾಗಿದೆ.

ಸುಳ್ಯದ ಶ್ರೀರಾಮಪೇಟೆ ರಸ್ತೆಯು ಮುಖ್ಯ ರಸ್ತೆಗೆ ಸಂಪರ್ಕವಾಗಿದ್ದು, ಈ ರಸ್ತೆಯಲ್ಲಿ ಕೆವಿಜಿ ಹಾಗು ಜೂನಿಯರ್ ಕಾಲೇಜ್ ಗಳಿದ್ದು, ಜ್ಯೋತಿ ಸರ್ಕಲ್ ನ ರಸ್ತೆಯಲ್ಲಿ ಶಾರದಾ ಮಹಿಳಾ ಕಾಲೇಜು ಹಾಗೂ ಸೈಂಟ್ ಜೋಸೆಫ್ ಶಾಲೆಗಳಿದೆ.

ಪ್ರತಿದಿನ ಬೆಳಿಗ್ಗೆ 8ರಿಂದ 10 ಗಂಟೆಯವರೆಗೆ, ಸಂಜೆ 4 ಗಂಟೆಯಿಂದ 5:30 ವರೆಗೆ,ಪ್ರತಿ ಶನಿವಾರ ಮಧ್ಯಾಹ್ನ 12:30 ರಿಂದ 2 ಗಂಟೆವರೆಗೆ ವಿದ್ಯಾರ್ಥಿಗಳು ಶಾಲೆ ಬಿಟ್ಟು ಹೊರಡುವ ಸಮಯದಲ್ಲಿ ವಿಪರೀತ ಟ್ರಾಫಿಕ್ ಜಾಮ್ ಆಗುತ್ತದೆ.

ಇಲ್ಲಿ ಪೊಲೀಸ್ ಅಥವಾ ಹೋಂ ಗಾರ್ಡ್ ವ್ಯವಸ್ಥೆ ಇದೆಯಾದರೂ ಈ ಹೊತ್ತಿನಲ್ಲಿ ಅವರು ಇಲ್ಲದೇ ಹೋದರೆ ತುಂಬ ಹೊತ್ತು ಟ್ರಾಫಿಕ್ ಜಾಮ್ ಉಂಟಾಗುತ್ತದೆ. ಇದಕ್ಕೆ ಸೂಕ್ತ ಪರಿಹಾರ ಶೀಘ್ರದಲ್ಲಿ ನಡೆಯಬೇಕಿದೆ. ಹಾಗಾಗಿ ಶಾಲೆ ಬಿಡುವ ಸಮಯದಲ್ಲಿ ಟ್ರಾಫಿಕ್ ಪೊಲೀಸ್ ವ್ಯವಸ್ಥೆ ತಪ್ಪದಂತೆ ನೋಡಿಕೊಳ್ಳಬೇಕಿದೆ.

ಸುಳ್ಯ ನಗರದಲ್ಲಿ ಸಮರ್ಪಕ ಪಾರ್ಕಿಂಗ್ ವ್ಯವಸ್ಥೆ ಇಲ್ಲದಿರುವುದು ಕೂಡಾ ವಾಹನ ದಟ್ಟಣೆಗೆ ಕಾರಣವಾಗಿದೆ.


” ವಿಪರೀತ ಟ್ರಾಫಿಕ್ ಜಾಮ್ ನಿಂದ ನಮಗೆ ಓಡಾಡಲು ಕಷ್ಟಕರವಾಗುತ್ತಿದೆ. ಇದರಿಂದ ನಮ್ಮ ಕೆಲಸಕ್ಕೂ ತೊಂದರೆಯಾಗುತ್ತಿದೆ. ಆದಷ್ಟು ಬೇಗ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು – ಗ್ರೀಷ್ಮ ಸುಳ್ಯ