ಕೋಲ್ಚಾರು: ಬಡವರ ಬಾಳಿಗೆ ಬೆಳಕಾಗುವ ಯುವ ಪಡೆಯ ಭರವಸೆಯ ಬೆಳಕು ತಂಡ

0

ಆಲೆಟ್ಟಿ ಪಂಚಾಯತ್ ವ್ಯಾಪ್ತಿಯ ಕೋಲ್ಚಾರಿನಲ್ಲಿ ಸಮಾನ ಮನಸ್ಕರ ಯುವಕರ ತಂಡವೊಂದು ನಿಸ್ವಾರ್ಥ ಸೇವೆಗೆ ಸಿದ್ಧ ರಾಗಿ ಬಡವರ ಬಾಳಿಗೆ ಭರವಸೆಯ ಬೆಳಕು ಚೆಲ್ಲುವ ಕಾಯಕಕ್ಕೆ ಮುಂದಾಗಿದ್ದಾರೆ. ಕಳೆದ ಒಂದು ವರುಷದಿಂದ ಬಡ ಕುಟುಂಬದ ಆಸರೆಯಾಗಿ ನೆರವಿಗೆ ಧಾವಿಸಿ ಕೈ ಜೋಡಿಸುತ್ತಿದ್ದಾರೆ.

ಆರ್ಥಿಕ ಸಂಕಷ್ಟದಲ್ಲಿರುವ ಬಡ ಕುಟುಂಬ ಗುರುತಿಸಿ ಅವರ ಮನೆಯ ದುರಸ್ತಿ ಕಾರ್ಯವನ್ನು ಯಾವುದೇ ಫಲಾಪೇಕ್ಷೆಯಿಲ್ಲದೆ ಶ್ರಮದಾನದ ಮೂಲಕ ನಿರ್ವಹಿಸಿರುತ್ತಾರೆ.

ಮಳೆ ಆರಂಭವಾಗುವ ಸಂದರ್ಭದಲ್ಲಿ ಮನೆಯ ಮಾಡಿನ ಕೆಲಸ ಮಾಡಬೇಕಾದ ಅನಿವಾರ್ಯತೆ ಇರುವುದು. ಆದರೆ ಕೈಯಲ್ಲಿ ಬಿಡಿಗಾಸು ಇಲ್ಲದೆ ಇರುವಾಗ ಕೆಲಸ ಮಾಡಬೇಕೆಂದರೆ ಸಾಧ್ಯನಾ. ಇಂತಹ ಪರಿಸ್ಥಿತಿಯನ್ನು ಗಮನಿಸಿದ ಯುವಕರ ತಂಡ ಅಶಕ್ತ ಕುಟುಂಬಕ್ಕೆ ಆಸರೆಯಾಗಿ ನಿಂತು ಮನೆ ದುರಸ್ತಿ ಪಡಿಸಿ ಬಡವರ ಪಾಲಿನ ಆಶಾಕಿರಣವಾಗಿ ಮೂಡಿ ಬಂದಿದೆ. ಯುವಕರ ಈ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಸಹಕಾರ ಹಾಗೂ ಶ್ಲಾಘನೆ ವ್ಯಕ್ತವಾಗುತ್ತಿದೆ.