














ಹರಿಹರ ಪಲ್ಲತಡ್ಕ ಪಾಲ್ತಾಡು ಎಂಬಲ್ಲಿ ಲಾರಿ ಪಿಕಪ್ ಪರಸ್ಪರ ಡಿಕ್ಕಿಯಾದ ಘಟನೆ ಇಂದು ಮಧ್ಯಾಹ್ನ ನಡೆದಿದೆ.

ಕಲ್ಮಕಾರು ಎಸ್ಟೇಟ್ ನಿಂದ ಕೇರಳಕ್ಕೆ ರಬ್ಬರ್ ಸಾಗಾಟ ಮಾಡುತ್ತಿದ್ದ ಲಾರಿ ಹಾಗೂ ಗುತ್ತಿಗಾರಿನಿಂದ ಹರಿಹರ ಕಡೆಗೆ ತರಕಾರಿ ಸಾಗಿಸುತ್ತಿದ್ದ ಪಿಕಪ್ ವಾಹನ ಪರಸ್ಪರ ಹರಿಹರ ಪಲ್ಲತ್ತಡ್ಕದ ಪಾಲ್ತಾಡು ಎಂಬಲ್ಲಿ ಡಿಕ್ಕಿ ಹೊಡೆದಿದೆ. ಎರಡೂ ವಾಹನಗಳ ಎದುರುಭಾಗ ನುಜ್ಜುಗುಜ್ಜಾಗಿದೆ.









