ಶಿಷ್ಠಾಚಾರಕ್ಕೆ ಕುಂದು ಆರೋಪ

0

ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಇಬ್ಬರು ಸಿಬ್ಬಂದಿಗಳ ಅಮಾನತು

ಶಿಷ್ಠಾಚಾರಕ್ಕೆ ಕುಂದು ಉಂಟಾಯಿತೆಂದು ಆರೋಪಿಸಿ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಎರಡು ಸಿಬ್ಬಂದಿಗಳನ್ನು ಅಮಾನತಿನಲ್ಲಿಟ್ಟ ಘಟನೆ ವರದಿಯಾಗಿದೆ.

ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಸಿಬ್ಬಂದಿಗಳಾದ ಪಿ.ಆರ್.ಒ.ಜಯರಾಮ ರಾವ್ ಹಾಗೂ ಶ್ರೀಶ ಕೆದಿಲಾಯ ಎಂಬವರನ್ನು ಅಮಾನತು‌ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಜೂ.11 ರಂದು ದೇವಸ್ಥಾನಕ್ಕೆ ಬಂದ ಜಡ್ಜ್ ಒಬ್ಬರಿಗೆ ಶಿಷ್ಟಾಚಾರದಲ್ಲಿ ಕುಂದು ಉಂಟಾಗಿದೆ ಎಂದು ಕಮಿಷನರ್ ಗೆ ದೂರು ಹೋದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ.