ಅಂಚೆ ಇಲಾಖಾ ಮಾಹಿತಿ

0

ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣ ಪತ್ರ ಯೋಜನೆ

ಯೋಜನೆಯ ಪ್ರಯೋಜನ ಏನು?.. ಅರ್ಜಿ ಸಲ್ಲಿಸುವ ವಿಧಾನ ಹೇಗೆ..

ಇಲ್ಲಿದೆ ಹೆಚ್ಚಿನ ಮಾಹಿತಿ……………

ಭಾರತೀಯ ಅಂಚೆ ಇಲಾಖೆಯಿಂದ ಮಹಿಳೆ ಹಾಗೂ ಹೆಣ್ಣು ಮಕ್ಕಳಿಗೆ ಲಾಭದಾಯಕವಾದಂತಹ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣ ಪತ್ರ ಎಂಬ ಸೀಮಿತ ಅವಧಿಯ ಯೋಜನೆಯನ್ನು ಜಾರಿಗೆ ತಂದಿದೆ.


ಇದಕ್ಕೆ ಅರ್ಜಿ ಸಲ್ಲಿಸುವ ವಿಧಾನ ಹಾಗೂ ಬೇಕಾಗುವ ದಾಖಲೆಗಳು :-

  • ಯಾವುದೇ ವಯಸ್ಸಿನ ಹೆಣ್ಣು ಮಗು ಈ ಖಾತೆಯನ್ನು ತೆರೆಯಬಹುದು. ವಯಸ್ಸಿನ ನಿರ್ಬಂದವಿಲ್ಲ.
    *ತಮ್ಮ ಸಮೀಪದ ಯಾವುದೇ ಶಾಖಾ, ಉಪ ಅಥವಾ ಪ್ರಧಾನ ಅಂಚೆ ಕಚೇರಿಯಲ್ಲಿ ಈ ಖಾತೆ ತೆರೆಯಬಹುದು.
    *ಕನಿಷ್ಠ ಠೇವಣಿ ರೂ.1000, ಗರಿಷ್ಠ ಠೇವಣಿ ರೂ.200000
    *ಖಾತೆ ತೆರೆದು ಎರಡು ವರ್ಷಗಳು ಪೂರ್ಣಗೊಂಡ ನಂತರ ಖಾತೆಯು ಪಕ್ವಗೊಳ್ಳುತ್ತದೆ.
    *೨ ಲಕ್ಷ ರೂ. ನ ಗರಿಷ್ಠ ಮಿತಿಯೊಳಗೆ ಒಬ್ಬರು ಈ ಯೋಜನೆಯಲ್ಲಿ ಎಷ್ಟು ಖಾತೆಗಳನ್ನಾದರೂ ತೆರೆಯಬಹುದು. ಆದರೆ ತೆರೆಯಲ್ಪಡುವ ಪ್ರತೀ ಖಾತೆಗಳ ನಡುವೆ ಕನಿಷ್ಠ ೩ ತಿಂಗಳ ಅಂತರವಿರಬೇಕು.
  • ದಿನಾಂಕ 01.04.2023 ರಿಂದ 31.03.2025 ರವರೆಗೆ ಈ ಖಾತೆಯನ್ನು ತೆರೆಯಬಹುದು.

  • ಬೇಕಾಗುವ ದಾಖಲೆಗಳು :

  • +ಖಾತೆ ತೆರೆಯುವ ಅರ್ಜಿ (ಅಂಚೆ ಕಚೇರಿಯಲ್ಲಿ ಲಭ್ಯ ಅಥವಾ Http://www.indiapost.gov.in/financial/pages/content/post office savings schemes. aspx ಲಭ್ಯವಿದೆ.)
    +2 ಪಾಸ್‌ಪೋರ್ಟ್ ಅಳತೆಯ ಪೋಟೋ
    +ಆಧಾರ್ ಕಾರ್ಡ್‌ನ ಪ್ರತಿ
    +ಪಾನ್‌ಕಾರ್ಡ್‌ನ ಪ್ರತಿ ಅಥವಾ ಫಾರಂ 60 ಸಲ್ಲಿಸಬಹುದು.
    *ಹಣವನ್ನು ನಗದು ಮೂಲಕ, ಚೆಕ್ ಮೂಲಕ ಅಥವಾ ನೆಫ್ಟ್ ಮೂಲಕ ಜಮಾ ಮಾಡಬಹುದು.
    *ಖಾತೆಯನ್ನು ತೆರೆದ ದಿನಾಂಕದಿಂದ ಒಂದು ವರ್ಷದ ಅವಧಿ ಮುಗಿದ ನಂತರ, ಖಾತೆ ಪಕ್ವಗೊಳ್ಳುವ ದಿನಾಂಕದ ಮೊದಲು ಇರುವ ಮೊತ್ತದ ಗರಿಷ್ಠ ೪೦% ವರೆಗೆ ಒಂದು ಬಾರಿ ಹಣವನ್ನು ಹಿಂಪಡೆಯಬಹುದು.
  • ಬಡ್ಡಿದರವು ವಾರ್ಷಿಕ 7.5% ಆಗಿದ್ದು, ತ್ರೈಮಾಸಿಕ ಆಧಾರದ ಮೇಲೆ ಲೆಕ್ಕ ಹಾಕಿ ಖಾತೆಗೆ ಜಮಾ ಮಾಡಲಾಗುತ್ತದೆ.
    *ತೆರಿಗೆ ವಿನಾಯಿತಿ ಸೌಲಭ್ಯ ಲಭ್ಯವಿಲ್ಲ.
    *ಸುಕನ್ಯಾ ಸಮೃದ್ಧಿ ಅಥವಾ ಭಾಗ್ಯಲಕ್ಷ್ಮಿ ಯೋಜನೆಯಡಿ ಖಾತೆ ಹೊಂದಿರುವವರು ಈ ಖಾತೆ ತೆರೆಯಬಹುದು.
  • ಅಂಚೆ ಕಚೇರಿಗೆ ಭೇಟಿ ನೀಡಿ ಖಾತೆ ತೆರೆಯಬೇಕು.
    *ಖಾತೆದಾರರು ಮರಣ ಹೊಂದಿದಲ್ಲಿ ಅಥವಾ ಖಾತೆಯನ್ನು ಹೆಣ್ಣು ಮಗುವಿನ ಹೆಸರಿನಲ್ಲಿ ತೆರೆದ ತಂದೆ/ ತಾಯಿ ಮರಣ ಹೊಂದಿದ ಸಂದರ್ಭದಲ್ಲಿ, ಖಾತೆದಾರರು ಅಥವಾ ಪೋಷಕರು ಗಂಭೀರ ಕಾಯಿಲೆಗೆ ತುತ್ತಾಗಿ ಖಾತೆಯನ್ನು ಮುಂದುವರಿಸಲು ಅಸಾಧ್ಯವೆಂದು ಕಂಡು ಬಂದಲ್ಲಿ ಖಾತೆಯನ್ನು ಅವಧಿಗೆ ಮುನ್ನ ಕೊನೆಗೊಳಿಸಲು ಸಾಧ್ಯವಿದೆ. ಈ ಸಂದರ್ಭದಲ್ಲಿ ಮೂಲ ಬಡ್ಡಿದರವೇ ಖಾತೆಗೆ ಅನ್ವಯಿಸುತ್ತದೆ. ಇತರ ಸಂದರ್ಭಗಳಲ್ಲಿ ಖಾತೆ ತೆರೆದ 6 ತಿಂಗಳ ನಂತರ ಅವಧಿ ಪೂರ್ಣವಾಗಿ ಖಾತೆಯನ್ನು ಕೊನೆಗೊಳಿಸಿದ್ದಲ್ಲಿ ಬಡ್ಡಿಯಲ್ಲಿ 2% ಕಡಿತಗೊಳಿಸಲಾಗುವುದು.
    *ಅಂಚೆ ಉಳಿತಾಯ ಖಾತೆಗೆ ಬ್ಯಾಂಕ್ ಖಾತೆಯಿಂದ ಫಂಡ್ ಟ್ರಾನ್ಸ್‌ಫರ್ ಮಾಡಿ ನಂತರ ಅರ್ಜಿ ಸಲ್ಲಿಸಿ ಈ ಯೋಜನೆ ಮಾಡಿಸಬಹುದು.

ಇದೊಂದು ಸೀಮಿತ ಅವಧಿಯ ಯೋಜನೆಯಾಗಿದ್ದು, ಎಲ್ಲರೂ ಈ ಯೋಜನೆಯ ಲಾಭ ಪಡೆಯುವಂತೆ ಮತ್ತು ಹೆಚ್ಚಿನ ಮಾಹಿತಿಗೆ ನಿಮ್ಮ ಸಮೀಪದ ಅಂಚೆ ಕಚೇರಿಯನ್ನು ಸಂಪರ್ಕಿಸಿ ಅಥವಾ http://www.indiapost.govt.in/ ಗೆ ಲಾಗಿನ್ ಎಂದು ಮಾಡಿ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.