ತಾಲೂಕು ಪಿಗ್ಮಿ ಸಂಗ್ರಾಹಕರ ಸಂಘದಿಂದ ಬೆಳ್ಳಾರೆ ಅಂಗನವಾಡಿ ಕೇಂದ್ರಕ್ಕೆ ಧನಸಹಾಯ

0

ಸುಳ್ಯ ತಾಲೂಕು ಪಿಗ್ಮಿ ಸಂಗ್ರಾಹಕರ ಸಂಘದ ವತಿಯಿಂದ ಜೂ.14 ರಂದು ಅಂಗನವಾಡಿ ಕೇಂದ್ರ ಬೆಳ್ಳಾರೆ ಇವರಿಗೆ ಸೋಲಾರ್ ಅಳವಡಿಕೆ ಮಾಡಲು ಸಂಘದ ವತಿಯಿಂದ ರೂ. 2000 ವನ್ನು ಅಂಗನವಾಡಿ ಕಾರ್ಯಕರ್ತೆಗೆ ಹಸ್ತಾಂತರಿಸಲಾಯಿತು.


ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಯಂ. ಹರಿಶ್ಚಂದ್ರ, ಉಪಾಧ್ಯಕ್ಷ ವಸಂತ ಬೋರ್ಕರ್, ನಿರ್ದೇಶಕಿ ಶ್ರೀಮತಿ ರತ್ನಾವತಿ ಹಾಗೂ ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಭಾರತಿ. ಕೆ. ಮತ್ತು ಸಹಾಯಕಿ ಶ್ರೀಮತಿ ಸುಜಾತಾ ಹಾಗೂ ಅಂಗನವಾಡಿ ಪುಟಾಣಿಗಳು ಉಪಸ್ಥಿತರಿದ್ದರು.