ಪಂಜ ಸ.ಪ.ಪೂ. ಕಾಲೇಜಿಗೆ ಕಬಡ್ಡಿ ಮ್ಯಾಟ್ ನೀಡಿದ ಹಿನ್ನೆಲೆ – ಸಂಸದ ನಳಿನ್ ಕುಮಾರ್ ಕಟೀಲುರವರಿಗೆ ಅಭಿನಂದನೆ

0

ಸರಕಾರಿ ಪದವಿ ಪೂರ್ವ ಕಾಲೇಜು ಪಂಜ ಇಲ್ಲಿಗೆ ಸಂಸದರ ಸ್ಥಳೀಯ ಪ್ರದೇಶ ಅಭಿವೃದ್ಧಿ ನಿಧಿಯಿಂದ ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ರವರು ಸುಮಾರು 3.50 ಲಕ್ಷ ವೆಚ್ಚದ ಉತ್ತಮ ಗುಣಮಟ್ಟದ ಕಬಡ್ಡಿ ಮ್ಯಾಟ್ ನೀಡಿದ್ದ ಹಿನ್ನೆಲೆಯಲ್ಲಿ ಕಾಲೇಜಿನ ಕ್ರೀಡಾ ಅಭಿವೃದ್ಧಿ ಸಮಿತಿಯಿಂದ ಜೂ.14 ರಂದು ಸಂಸದರ ಮನೆ ಪಾಲ್ತಾಡಿನಲ್ಲಿ ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ನಿವೃತ್ತ ಯುವಜನ ಸೇವಾ ಮತ್ತು ಕ್ರೀಡಾಧಿಕಾರಿ ಮಾಧವ ಬಿ.ಕೆ, ಪಂಜ ಮಾಜಿ ಗ್ರಾ ಪಂ ಅಧ್ಯಕ್ಷ ಕಾರ್ಯಪ್ಪ ಚಿದ್ಗ ಲ್, ಕ್ರೀಡಾಭಿವೃದ್ದಿ ಸಮಿತಿ ಅಧ್ಯಕ್ಷ ಚೀನಪ್ಪ ಕಾಣಿಕೆ, ದೈಹಿಕ ಶಿಕ್ಷಣ ಶಿಕ್ಷಕ ಯೋಗೀಶ್ ಚಿದ್ಗಲ್, ಪರಮೇಶ್ವರ ನೆಲ್ಲಿಕೋಡಿ, ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಪಕ್ಷದ ಪ್ರಮುಖರಾದ ಎನ್.ಎ ರಾಮಚಂದ್ರ, ಎಸ್.ಎನ್.
ಮನ್ಮಥ, ಕೃಪಾ ಶಂಕರ್ ತುದಿಯಡ್ಕ, ಜಯಪ್ರಕಾಶ್ ಕುಂಚಡ್ಕ, ಸಂತೋಷ್ ಜಾಕೆ, ವಿನಯಕುಮಾರ್ ಕಂದಡ್ಕ, ಸುಭೋದ್ ಶೆಟ್ಟಿ ಮೇನಾಲ, ರಾಕೇಶ್ ರೈ ಕೆಡೆಂಜಿ ಮೊದಲಾದವರು ಉಪಸ್ಥಿತರಿದ್ದರು.