ಸುಳ್ಯದಲ್ಲಿ ನಾಡ ಮಾವು ಮತ್ತು ಹಲಸು ಸಂರಕ್ಷಣೆ ಹಾಗೂ ಕಸಿ ಕಟ್ಟುವ ತರಬೇತಿ ಕಾರ್ಯಾಗಾರದ ಉದ್ಘಾಟನೆ

0

ಸುಳ್ಯ ತೋಟಗಾರಿಕಾ ಇಲಾಖೆ, ಸುಳ್ಯ ರೈತ ಉತ್ಪಾದಕ ಕಂಪೆನಿ ನಿ. ನಾಡ ಮಾವು ಮತ್ತು ಹಲಸು ಸಂರಕ್ಷಣಾ ಬಳಗ ದಕ್ಷಿಣ ಕನ್ನಡ ಮತ್ತು ಉಡುಪಿ ವಿಭಾಗದ ಸಹಯೋಗದಲ್ಲಿ ಸುಳ್ಯದ ಎ.ಪಿ.ಎಂ.ಸಿ ಸಭಾಭವನದಲ್ಲಿ ನಾಡ ಮಾವು ಮತ್ತು ಹಲಸು ಸಂರಕ್ಷಣೆ ಹಾಗೂ ಕಸಿ ಕಟ್ಟುವ ತರಬೇತಿ ಕಾರ್ಯಾಗಾರವು ಇಂದು ಬೆಳಗ್ಗೆ ಉದ್ಘಾಟನೆಗೊಂಡಿತು. ಒಂದು ದಿನದ ತರಬೇತಿ ಕಾರ್ಯಾಗಾರದ ಸಮಾರಂಭದ ಅಧ್ಯಕ್ಷತೆಯನ್ನು ಸುಳ್ಯ ರೈತ ಉತ್ಪಾದಕ ಕಂಪನಿಯ ಅಧ್ಯಕ್ಷ ವೀರಪ್ಪ ಗೌಡ ಕಣ್ಕಲ್ ವಹಿಸಿದ್ದರು.


ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ರಮೇಶ್ ಕಾರ್ಯಾಗಾರ ವನ್ನು ದೀಪ ಪ್ರಜ್ವಲಿಸಿ ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ‌ಸಂಪನ್ಮೂಲ ವ್ಯಕ್ತಿ ಕೃಷಿ ತಜ್ಞ, ಅಡಿಕೆ ಪತ್ರಿಕೆ ಪ್ರಧಾನ ಸಂಪಾದಕ ಶ್ರೀಪಡ್ರೆ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ನಾಗರಾಜ್, ವಿಧಾನ ಪರಿಷತ್ ಮಾಜಿ ಸದಸ್ಯ ಅಣ್ಣಾ ವಿನಯಚಂದ್ರ, ಪಶು ವೈದ್ಯರು, ನಾಡ ಮಾವುಮಿತ್ರ ಬಳಗ ಸ್ಥಾಪಕರು
ಡಾ. ಮನೋಹರ ಉಪಾಧ್ಯ,ಸುಳ್ಯ ಎ.ಪಿ.ಯಂ.ಸಿ ಕಾರ್ಯದರ್ಶಿ ನವೀನ್ ಕಮಾರ್, ಕಸಿ ಕಟ್ಟುವಿಕೆ ತರಬೇತಿಯ ಸಂಪನ್ಮೂಲ ವ್ಯಕ್ತಿ ಶ್ಯಾಮ್ ಗುತ್ತಿಗಾರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಗಾಯಕಿ ಶ್ರೀಮತಿ ಆರತಿ ಪುರುಷೋತ್ತಮ ರೈತ ಗೀತೆ ಹಾಡಿದರು.ಕಾರ್ಯಕ್ರಮ ಸಂಯೋಜಕ ಜಯರಾಮ ಮುಂಡೋಳಿಮೂಲೆ ಪ್ರಾಸ್ತಾವಿಕ ಮಾತಿನೊಂದಿಗೆ ಸ್ವಾಗತಿಸಿದರು.


ಸಂಯೋಜಕ ಸಂಯೋಜಕ ಶ್ರೀಶ ಭಟ್ ಮಾಯ್ಪಡ್ಕ, ಕಂಪನಿಯ ಸಿ.ಇ.ಒ ಹರೀಶ್ ಸಹಕರಿಸಿದರು. ಶ್ರೀಮತಿ ಮಧುರ ಕಾರ್ಯಕ್ರಮ ನಿರ್ವಹಿಸಿದರು.