ಹೀಗೊಂದು ವಂಚನೆ….

0

ಆನ್ ಲೈನ್ ಸೀರೆ ಬುಕ್ಕಿಂಗ್ ನಲ್ಲಿ ಬಂದುದು ಹರಿದ ಸೀರೆ…!!

ಈಗ ಎಲ್ಲರೂ ಹೆಚ್ಚಾಗಿ ಆನ್ ಲೈನ್ ಮೂಲಕ ತಮಗೆ ಬೇಕಾದ ವಸ್ತುಗಳನ್ನು ಬುಕ್ಕಿಂಗ್ ಮಾಡಿ ತರಿಸಿಕೊಳ್ಳುತ್ತಾರೆ. ಅದಕ್ಕೆಂದೇ ಬೇರೆ ಬೇರೆ ಕಂಪೆನಿಗಳ ಆಪ್ ಗಳೂ ಇವೆ. ಹೀಗೆ ಆನ್ ಲೈನ್ ನಲ್ಲಿ ಸೀರೆ ಬುಕ್ಕಿಂಗ್ ಮಾಡಿದವರಿಗೆ ಪಾರ್ಸೆಲ್ ಬಂದಿದ್ದು ಓಪನ್ ಮಾಡಿ ನೋಡಿದಾಗ ಆ ಸೀರೆ ಹರಿದಿತ್ತು….!

ಅಜ್ಜಾವರ ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಲೀಲಾ ಮನಮೋಹನ್ ರವರು ಮೀಶೋ ಆಪ್ ಮೂಲಕ ಸೀರೆ ಬುಕ್ ಮಾಡಿದ್ದರು. ಕೆಲ ದಿನಗಳ ಬಳಿಕ ಅವರಿಗೆ ಪಾರ್ಸೆಲ್ ಬಂತು.‌ಅದನ್ನು ಓಪನ್ ಮಾಡಿದಾಗ ಅವರಿಗೇ ಆಶ್ಚರ್ಯ ಕಾದಿತ್ತು. ಸೀರೆ ಬಿಡಿಸಿದಾಗ ಬರೇ ಅರ್ಧ ಮಾತ್ರ ಇತ್ತು. ಸೀರೆ 5 ಮೀಟರ್ ಉದ್ದ ಇದ್ದರೂ ಅಗಲ‌ ಕೇವಲ ಒಂದೂವರೆ ಫೀಟ್ ಮಾತ್ರ ಇತ್ತು. ತಕ್ಷಣ ಅವರು ಪಾರ್ಸೆಲ್ ತಂದವರಿಗೆ ಕರೆ ಮಾಡಿ ತನ್ನ ಅಸಮಾಧಾನ ವ್ಯಕ್ತಪಡಿಸಿದರಲ್ಲದೆ, ವಾಪಸ್ ಕಳುಹಿಸಿದರು.

ನಾನು ಕೆಲ ದಿನಗಳ‌ ಹಿಂದೆ ಸೀರೆ ಬುಕ್ ಮಾಡಿದ್ದು ಅದು ಸರಿಯಾಗಿ ಬಂದಿತ್ತು. ಅದೇ ರೀತಿಯ ಸೀರೆಯಲ್ಲಿ ಕಲರ್ ಬೇರೆ ನೋಡಿ‌ ಮತ್ತೊಂದು ಸೀರೆ ಬುಕ್ ಮಾಡಿದೆ.‌ ಪಾರ್ಸೆಲ್ ಬಂತು. ಅದನ್ನು ಓಪನ್ ಅಡಿದಾಗ ಅರ್ಧ ಸೀರೆ ಇದೆ. ಮತ್ತು ಸೀರೆಯ ಒಂದು‌ಬದಿ ಸ್ಟಿಚ್ ಹಾಕಲಾಗಿದೆ. ಈ ರೀತಿಯ ಮೋಸ‌ ಯಾರಿಗೂ ಆಗಬಾರದು. ನಾನು ತಕ್ಷಣ ಸೀರೆಯನ್ನು ಹಿಂದಕ್ಕೆ ಕಳುಹಿಸಿದ್ದೇನೆ. ಈ‌ಬಗ್ಗೆ ದೂರು ನೀಡಲಿದ್ದೇನೆ ಎಂದು ಲೀಲಾ ಮನಮೋಹನ್ ಸುದ್ದಿಗೆ ತಿಳಿಸಿದ್ದಾರೆ.