ಸಂಪಾಜೆ ಮೂಲಭೂತ ಸೌಕರ್ಯಗಳ ಹಿತರಕ್ಷಣಾ ವೇದಿಕೆಯ ನಿಯೋಗದಿಂದ ಕಂದಾಯ ಹಾಗೂ ಅರಣ್ಯ ಸಚಿವರ ಭೇಟಿ

0

ಪ್ರಮುಖ ಸಮಸ್ಯೆಗಳ ಬಗ್ಗೆ ಸಚಿವರುಗಳ ಗಮನಕ್ಕೆ ತಂದ ನಿಯೋಗ

ಕರ್ನಾಟಕ ಸರ್ಕಾರದ ಕಂದಾಯ ಸಚಿವರಾದ ಶ್ರೀ ಕೃಷ್ಣ ಭೈರೇಗೌಡ ಹಾಗೂ ಅರಣ್ಯ ಸಚಿವರಾದ ಶ್ರೀ ಈಶ್ವರ್ ಖಂಡ್ರೆ ಅವರನ್ನು ಸಂಪಾಜೆ ಮೂಲಭೂತ ಸೌಕರ್ಯಗಳ ಹಿತರಕ್ಷಣಾ ವೇದಿಕೆಯ ನಿಯೋಗವು ಬೆಂಗಳೂರಿನ ವಿಕಾಸ ಸೌಧದ ಅವರ ಕಚೇರಿಯಲ್ಲಿ ಭೇಟಿಯಾಗಿ ಕಂದಾಯ ಹಾಗೂ ಅರಣ್ಯ ಇಲಾಖೆಯ ಜಂಟಿ ಸರ್ವೇ ಮಾಡುವಂತೆ, ಪ್ಲಾಟಿಂಗ್ ಸಮಸ್ಯೆಯ ಬಗ್ಗೆ, 94 ಸಿ ಹಕ್ಕು ಪತ್ರದ ಬಗ್ಗೆ, ಕಂದಾಯ ಇಲಾಖೆಯ ಮೂಲಕ ಸುಳ್ಯ ತಾಲೂಕಿನಲ್ಲಿ ಬಡವರ ಕಡತಗಳು ವಿಲೇವಾರಿ ಆಗದೇ ಇರುವುದು, ಸಂಪಾಜೆ ಗ್ರಾಮದ ಸಾರ್ವಜನಿಕ ಸ್ಮಶಾನದ ಕೊರತೆಯ ಬಗ್ಗೆ ಉಭಯ ಸಚಿವರುಗಳ ಗಮನಕ್ಕೆ ತರಲಾಯಿತು. ತಕ್ಷಣವೇ ಸ್ಪಂದಿಸಿದ ಸಚಿವರುಗಳು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳಿಗೆ ಹಾಗೂ ಮಂಗಳೂರು ಉಪ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಸಮಸ್ಯೆಯನ್ನು ಇತ್ಯರ್ಥ ಪಡಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ನಿಯೋಗದಲ್ಲಿ ಸಂಪಾಜೆ ಮೂಲಭೂತ ಸೌಕರ್ಯಗಳ ಹಿತರಕ್ಷಣಾ ವೇದಿಕೆಯ ಅಧ್ಯಕ್ಷರಾದ ಕೆ.ಪಿ.ಜಾನಿ, ಪ್ರಧಾನ ಕಾರ್ಯದರ್ಶಿ ವಸಂತ ಗೌಡ ಪೆಲ್ತಡ್ಕ, ಸದಸ್ಯರುಗಳಾದ ಮಹಮ್ಮದ್ ಕುಂಞ ಗೂನಡ್ಕ, ಎ.ಕೆ.ಇಬ್ರಾಹಿಂ ಹಾಗೂ ಶೌವಾದ್ ಗೂನಡ್ಕ ಉಪಸ್ಥಿತರಿದ್ದರು.