ಕೊಡಿಯಾಲಬೈಲು ಎಂ.ಜಿ.ಎಂ. ಶಾಲೆಯಲ್ಲಿ ‌ಕರಾಟೆ ತರಗತಿ ಉದ್ಘಾಟನೆ

0

ಸುಳ್ಯ ಕೊಡಿಯಾಲಬೈಲು ಎಂ.ಜಿ.ಎಂ. ವಿದ್ಯಾ ಸಂಸ್ಥೆಯಲ್ಲಿ ಕರಾಟೆ ತರಗತಿಯ ಉದ್ಘಾಟನೆ ಆ. 7 ರಂದು ನಡೆಸಲಾಯಿತು.

ಶಾಲಾ ಸಂಚಾಲಕ ದೊಡ್ಡಣ್ಣ ಬರೆ ಮೇಲು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಉದ್ಘಾಟನೆ ನೆರವೇರಿಸಿದರು.

ಕರಾಟೆ ಅಧ್ಯಾಪಕ ಚಂದ್ರಶೇಖರ್ ಕನಕಮಜಲು ಇವರ ಮಾರ್ಗದರ್ಶನದಲ್ಲಿ ವಾರದಲ್ಲಿ ಒಂದು ದಿನ ಕರಾಟೆ ತರಗತಿಯನ್ನು ನಡೆಸಲಾಗುವುದು.

ವೇದಿಕೆಯಲ್ಲಿ ಮುಖ್ಯ ಶಿಕ್ಷಕಿ ವಿಜಯಲಕ್ಷ್ಮಿ ಉಪಸ್ಥಿತರಿದ್ದರು. ಸಹ ಶಿಕ್ಷಕಿ ವಿದ್ಯಾಶ್ರೀ ಸ್ವಾಗತಿಸಿದರು.
ಸಹ ಶಿಕ್ಷಕಿ ಭವ್ಯ ಕಾರ್ಯಕ್ರಮ ನಿರೂಪಿಸಿದರು. ಸಹ ಶಿಕ್ಷಕಿ ರಮ್ಯ ವಂದಿಸಿದರು