ಬಳ್ಪ ಶಾಲೆಯಿಂದ ವರ್ಗಾವಣೆಗೊಂಡ ಶ್ರೀಮತಿ ಗುಲಾಬಿ ಎ ರವರಿಗೆ ಬೀಳ್ಕೊಡುಗೆ ಸಮಾರಂಭ

0

ಬಳ್ಪ ಸ.ಉ.ಹಿ.ಪ್ರಾಥಮಿಕ ಶಾಲೆಯಲ್ಲಿ ಹಿಂದಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ ಶ್ರೀಮತಿ ಗುಲಾಬಿ ಎ ಇವರು ಪಂಜ ಸ.ಮಾ.ಹಿ.ಪ್ರಾಥಮಿಕ ಶಾಲೆಗೆ ವರ್ಗಾವಣೆ ಹೊಂದಿದ ಹಿನ್ನೆಲೆಯಲ್ಲಿ ಮೂಲ ಶಾಲೆಯಲ್ಲಿ ವರ್ಗಾವಣೆಗೊಂಡ ಶಿಕ್ಷಕಿಗೆ ದಿನಾಂಕ ಆ.7 ರಂದು ಬೀಳ್ಕೊಡುಗೆ ಸಮಾರಂಭವನ್ನು ಹಮ್ಮಿಕೊಳ್ಳಲಾಯಿತು.

ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷರ ಉಮೇಶ್ ಬುಡೆಂಗಿ ವಹಿಸಿದ್ದರು ವೇದಿಕೆಯಲ್ಲಿ ಗ್ರಾ.ಪಂ ಅಧ್ಯಕ್ಷರು , ಉಪಾಧ್ಯಕ್ಷರು, ಎಸ್.ಡಿ.ಎಂ.ಸಿ ಉಪಾಧ್ಯಕ್ಷರು, ಅಂಗನವಾಡಿ ಕಾರ್ಯಕರ್ತೆ, ಗ್ರಾ.ಪಂ ಕಾರ್ಯದರ್ಶಿ, ದೈಹಿಕ ಶಿಕ್ಷಣ ಶಿಕ್ಷಕಿ, ಮುಖ್ಯ ಶಿಕ್ಷಕರು ಹಾಗೂ ಬಳ್ಪ ಅರಣ್ಯ ಸಮಿತಿಯ ಅಧ್ಯಕ್ಷರು ಉಪಸ್ಥಿತರಿದ್ದರು,

ಎಂಟನೇ ತರಗತಿಯ ವಿಧ್ಯಾರ್ಥಿಗಳು ಪ್ರಾರ್ಥಿಸಿದರು, ಗೌರವ ಶಿಕ್ಷಕಿ ಲೋಲಾಕ್ಷಿ ಸ್ವಾಗತಿಸಿದರು, ಬಳಿಕ ವಿಧ್ಯಾರ್ಥಿಗಳು , ಶಿಕ್ಷಕರು, ಹಾಗೂ ಪೋಷಕರು ವರ್ಗಾವಣೆಗೊಂಡ ಶಿಕ್ಷಕರ ಬಗ್ಗೆ ಅನಿಸಿಕೆ ವ್ಯಕ್ತ ಪಡಿಸಿದರು ಬಳಿಕ ಎಸ್.ಡಿ.ಎಂ, ಸಿ , ಪೋಷಕರು ಶಿಕ್ಷಕರು, ವಿಧ್ಯಾರ್ಥಿಗಳು ಕಿರು ಕಾಣಿಕೆಯನ್ನು ನೀಡಿ ಗೌರವಿಸಲಾಯಿತು, ವರ್ಗಾವಣೆಗೊಂಡ ಶಿಕ್ಷಕರು ರೂ 10000 ದ ದತ್ತಿ ನಿಧಿಯನ್ನು ಸ್ಥಾಪಿಸಿದರು.ಶಿಕ್ಷಕ ಆನಂದ ವೈ ಕಾರ್ಯಕ್ರಮ ನಿರೂಪಿಸಿದರು. ಗೌರವ ಶಿಕ್ಷಕಿ ಹರ್ಷಿತ ವಂದಿಸಿದರು,

LEAVE A REPLY

Please enter your comment!
Please enter your name here