ಮೊಗರ್ಪಣೆ ಹಿದಾಯತುಲ್ ಇಸ್ಲಾಂ ಜಮಾಅತ್ ಕಮಿಟಿ ವತಿಯಿಂದ ಸ್ವಾತಂತ್ರ್ಯೋತ್ಸವ ಆಚರಣೆ

0

ಮೊಗರ್ಪಣೆ ಹಿದಾಯತುಲ್ ಇಸ್ಲಾಂ ಜಮಾಅತ್ ಕಮಿಟಿ ವತಿಯಿಂದ ಸ್ವಾತಂತ್ರ್ಯದಿನಾಚರಣೆ ಆಚರಿಸಲಾಯಿತು.ಸ್ಥಳೀಯ ಕಮಿಟಿ ಅಧ್ಯಕ್ಷ ಹಾಜಿ ಇಬ್ರಾಹಿಂ ಸೀಫುಡ್ ಧ್ವಜಾರೋಹಣ ನೆರವೇರಿಸಿದರು.

ಸ್ಥಳೀಯ ಮಸ್ಜಿದ್ ಮುದರ್ರಿಸ್ ಹಾಫಿಲ್ ಸೌಕತ್ ಅಲಿ ಸಕಾಫಿ ಪ್ರಾರ್ಥನೆ ನೆರವೇರಿಸಿದರು. ನೂರುಲ್ ಇಸ್ಲಾಂ ಹೈಯರ್ ಸೆಕೆಂಡರಿ ಮದರಸ ಸದರ್ ಮುಅಲ್ಲಿಮ್ ಅಬ್ದುಲ್ ಕರೀಂ ಸಕಾಫಿ ದಿನದ ಸಂದೇಶ ಭಾಷಣವನ್ನು ಮಾಡಿದರು.

ಈ ಸಂದರ್ಭದಲ್ಲಿ ಸಮಿತಿಯ ಪದಾಧಿಕಾರಿಗಳು ಸದಸ್ಯರು, ಮದ್ರಸಾ ಆಧ್ಯಾಪಕ ವೃಂದದವರು,ಪೋಷಕ ವೃಂದದವರು,ಮದರಸಾ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಎಸ್‌ಬಿಎಸ್ ಕೋಶಾಧಿಕಾರಿ ಮಿನ್ಹಜ್ ಸ್ವಾಗತಿಸಿ, ಅಧ್ಯಾಪಕರಾದ ಹಂಝ ಮುಸ್ಲಿಯಾರ್ ವಂದಿಸಿದರು.