ಕಳಂಜ: ಬುಖಾರಿಯಾ ಜುಮಾ ಮಸ್ಜಿದ್ ನಲ್ಲಿ ಸ್ವಾತಂತ್ರ್ಯ ದಿನಾಚರಣೆ

0

ಕಳಂಜದ ಬುಖಾರಿಯಾ ಜುಮಾ ಮಸ್ಜಿದ್ ನಲ್ಲಿ ಮದರಸ ವಿದ್ಯಾರ್ಥಿಗಳೊಂದಿಗೆ ಸ್ವಾತಂತ್ರ್ಯ ದಿನವನ್ನು ಆಚರಿಸಲಾಯಿತು.
ಆಡಳಿತ ಕಮಿಟಿ ಅಧ್ಯಕ್ಷ ಇಸ್ಮಾಯಿಲ್ ಪಿ.ಎಸ್, ಗೌರವಾಧ್ಯಕ್ಷ ಎ.ಬಿ ಮೊಯ್ದೀನ್, ಕಾರ್ಯದರ್ಶಿ ಮಜೀದ್ ಎ ಕೆ, ಮಾಜಿ ಅಧ್ಯಕ್ಷರುಗಳಾದ ಮಹಮ್ಮದ್ ಕೆ.ಎಂ, ಅಬೂಬಕ್ಕರ್ ಎನ್ ಮತ್ತಿತರರು ಧ್ವಜಾರೋಹಣ ನೆರವೇರಿಸಿದರು.

ನಾಡಿನಲ್ಲಿ ಭಾವೈಕ್ಯತೆ ಮೂಡಿಸುವಲ್ಲಿ ಒಗ್ಗಟ್ಟಾಗಿರಬೇಕು ಎಂದು ಖತೀಬರು ಅಬ್ಬಾಸ್ ಮದನಿಯವರು ಹೇಳಿದರು. ಮದರಸ ವಿದ್ಯಾರ್ಥಿಗಳು ಝಂಡಾ ಊಂಚಾ ಗೀತೆಯನ್ನು ಹಾಡಿದರು. ಇಶ್ಫಾಕ್ ಸಾರೇ ಜಹಾಂಸೆ ಅಚ್ಚಾ ಗೀತೆಯನ್ನು ಹಾಡಿದರು. ನೆರೆದಿರುವ ಎಲ್ಲರೂ ಒಗ್ಗಟ್ಟಿನಿಂದ, ಭಾವೈಕ್ಯತೆ, ಸಹೋದರತ್ವ, ಜಾತ್ಯಾತೀತ ಮನೋಭಾವ ಮೂಡಿಸಲು ಸಂವಿಧಾನದ ಪ್ರತಿಜ್ಞಾ ವಿಧಿಯನ್ನು ಒಕ್ಕೊರಲಿನಿಂದ ಸ್ವೀಕರಿಸಿದರು. ಕಾರ್ಯಕ್ರಮವನ್ನು ರಾಷ್ಟ್ರಗೀತೆಯಿಂದ ಕೊನೆಗೊಳಿಸಲಾಯಿತು. ರಫೀಕ್ ಎ ಕೆ ರವರು ಸಿಹಿ ನೀಡಿದರು.