ಕೆವಿಜಿ ಐಪಿಎಸ್-ಸಿಬಿಎಸ್ ಸಿ ಒಕ್ಕೂಟದ ಕೆಸರುಗದ್ದೆ ಕ್ರೀಡಾಕೂಟದಲ್ಲಿ ವಿದ್ಯಾರ್ಥಿಗಳ ಸಾಧನೆ

0

ಕೆವಿಜಿ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆಯ ಮಕ್ಕಳು ಕೊಡಗಿನ ಬ್ರಹ್ಮಗಿರಿ ಸಹೋದಯ ಸಿಬಿಎಸ್ಇ ಒಕ್ಕೂಟವು ಆಯೋಜಿಸಿದ ಕೆಸರು ಗದ್ದೆ ಕ್ರೀಡಾಕೂಟದಲ್ಲಿ ಭಾಗವಹಿಸಿ ವಿವಿಧ ಬಹುಮಾನಗಳನ್ನು ಪಡೆದುಕೊಂಡರು.

ಕೆವಿಜಿ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆ ಸೇರಿದಂತೆ ಒಟ್ಟು ಎಂಟು ಶಾಲೆಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿತು. ಕೆವಿ ಜಿ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ನ ವಿದ್ಯಾರ್ಥಿ -ವಿದ್ಯಾರ್ಥಿನಿಯರು ಹಲವು ಸ್ಪರ್ಧೆಗಳಲ್ಲಿ ಭಾಗವಹಿಸಿ, ಹುಡುಗರು ಹಗ್ಗಜಗ್ಗಾಟದಲ್ಲಿ ಪ್ರಥಮ, ಹುಡುಗಿಯರು ದ್ವಿತೀಯ, ರಿಲೇ ಯಲ್ಲಿ ಹುಡುಗಿಯರು ತೃತೀಯ, 100ಮೀ ಕೆಸರುಗದ್ದೆ ಓಟದ ಸ್ಪರ್ಧೆಯಲ್ಲಿ ಎಂಟನೇ ತರಗತಿಯ ಪ್ರತೀಕ ಯಂ. ಕೆ ತೃತೀಯ ಸ್ಥಾನವನ್ನು ಪಡೆದಳು.

ಪ್ರಾಥಮಿಕ ವಿಭಾಗದ ರಿಲೆಯಲ್ಲಿ ಹುಡುಗರು ದ್ವಿತೀಯ ಹಾಗೂ ಹುಡುಗಿಯರು ದ್ವಿತೀಯ ಬಹುಮಾನವನ್ನು ಪಡೆದುಕೊಂಡರು.

ಈ ವಿದ್ಯಾರ್ಥಿಗಳಿಗೆ ದೈಹಿಕ ಶಿಕ್ಷಕರಾದ ತೀರ್ಥವರ್ಣ ಬಳ್ಳಡ್ಕ, ಶ್ರೀಮತಿ ಸುಪ್ರಿಯಾ ಮತ್ತು ಆಶಾ ಜ್ಯೋತಿ ಮಾರ್ಗದರ್ಶನವನ್ನು ನೀಡಿದರು .

ಈ ಕ್ರೀಡಾ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳನ್ನು ಶಾಲಾ ಸಂಚಾಲಕ ಡಾ. ರೇಣುಕಾಪ್ರಸಾದ್ ಕೆ. ವಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಉಜ್ವಲ್ ಯು. ಜೆ ಮತ್ತು ಶಾಲಾ ಪ್ರಾಂಶುಪಾಲ ಅರುಣ್ ಕುಮಾರ್, ಉಪ ಪ್ರಾಂಶುಪಾಲೆ ಶಿಲ್ಪ ಬಿದ್ದಪ್ಪ ಮತ್ತು ಎಲ್ಲಾ ಶಿಕ್ಷಕ ವೃಂದದವರು ಅಭಿನಂದಿಸಿದರು.