ಜಾಲ್ಸೂರು: ಯಕ್ಷಗಾನ ಭಾಗವತಿಕೆ ತರಬೇತಿ ಉದ್ಘಾಟನೆ

0

ಜಾಲ್ಸೂರು ಗ್ರಾಮ ಪಂಚಾಯತ್ ಗ್ರಂಥಾಲಯದ ಮಾಹಿತಿ ಕೇಂದ್ರದಲ್ಲಿ ಅಂಗನವಾಡಿ ಕಾರ್ಯಕರ್ತೆಯಾದ ತುಳಸಿ ಎಂ. ಇವರ ನೇತೃತ್ವದಲ್ಲಿ ಯಕ್ಷಗಾನ ಭಾಗವತಿಗೆ ತರಗತಿಯು ಆ.19ರಂದು ಉದ್ಘಾಟನೆಗೊಂಡಿತು.

ಭಾಗವತರಾದ ದಯಾನಂದ ಪಾಟಾಳಿ ಮಯ್ಯಾಳ ಅವರು ಮಕ್ಕಳಿಗೆ ಭಾಗವತಿಗೆ ತರಗತಿಯನ್ನು ಆರಂಭಿಸಿದರು.
ಕಾರ್ಯಕ್ರಮದಲ್ಲಿ ಗ್ರಂಥಮಿತ್ರ ಕಾರ್ಯಕ್ರಮವನ್ನು ಪ್ರಥಮ ದರ್ಜೆ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ಗ್ರಾಮ ಡಿ.ಜಿ. ವಿಕಾಸನದ ತಾಲೂಕು ಸಂಯೋಜಕ ದಿನೇಶ್ ಅವರು ಉಪಸ್ಥಿತರಿದ್ದರು. ಯಕ್ಷಗಾನ ತರಬೇತಿಯಲ್ಲಿ ಸುಮಾರು 25 ಮಕ್ಕಳು ಭಾಗವಹಿಸಿದ್ದರು.