ತಾಲೂಕಿನ ಹುದ್ದೆ ಖಾಲಿ ಇದ್ದ ಗ್ರಾಮಗಳಿಗೆ ಪ್ರಭಾರ ಗ್ರಾಮ ಆಡಳಿತಾಧಿಕಾರಿಗಳ ನೇಮಕ

0

ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಟಿಯಿಂದ ತಾತ್ಕಾಲಿಕವಾಗಿ ಮುಂದಿನ ಆದೇಶದವರೆಗೆ ತಾಲೂಕಿನಲ್ಲಿ ಹುದ್ದೆ ಖಾಲಿ ಇರುವ 4 ಗ್ರಾಮಗಳಿಗೆ ಪ್ರಭಾರ ಆಡಳಿತಾಧಿಕಾರಿ ನೇಮಕಗೊಳಿಸಿ ತಹಶೀಲ್ದಾರ್ ಆದೇಶ ಹೊರಡಿಸಿದ್ದಾರೆ.

ಉಬರಡ್ಕಮಿತ್ತೂರು ಗ್ರಾಮ ಆಡಳಿತಾಧಿಕಾರಿ ಮಂಜುನಾಥ್ ಅವರಿಗೆ ಸಂಪಾಜೆ ಗ್ರಾಮ, ಮಂಡೆಕೋಲು ಗ್ರಾಮ ಆಡಳಿತಾಧಿಕಾರಿ ಅಜಿತ್ ಕುಮಾರ್ ಗೆ ಮಂಡೆಕೋಲು ಮತ್ತು ಅಜ್ಜಾವರ, ಅಜ್ಜಾವರ ಗ್ರಾಮ ಆಡಳಿತಾಧಿಕಾರಿ ಶರತ್ ಕುಮಾರ್ ಅವರಿಗೆ ಆಲೆಟ್ಟಿ, ಅರಂತೋಡು ಮತ್ತು ತೊಡಿಕಾನ ಗ್ರಾಮ, ಭೂಮಿ ಶಾಖೆಯ ಶಾಹಿನಾ ಅವರಿಗೆ ಜಾಲ್ಸೂರು ಮತ್ತು ಕನಕಮಜಲು ಗ್ರಾಮಗಳ ಪ್ರಭಾರ ಆಡಳಿತಾಧಿಕಾರಿಗಳಾಗಿ ಮುಂದಿನ ಆದೇಶದವರೆಗೆ ಕರ್ತವ್ಯ ನಿರ್ವಹಿಸುವಂತೆ ಸುಳ್ಯ ತಹಶೀಲ್ದಾರ್ ಆದೇಶ ಹೊರಡಿಸಿದ್ದಾರೆ.