ಸುಳ್ಯ ವಲಯ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಜೂನಿಯರ್ ಕಾಲೇಜಿಗೆ ಸಮಗ್ರ ಪ್ರಶಸ್ತಿ

0

ಸರಕಾರಿ ಪ್ರೌಢ ಶಾಲೆ ದುಗಲಡ್ಕ ದಲ್ಲಿ ನಡೆದ ನಗರ ವಲಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಒಂಬತ್ತು ಪ್ರಥಮ ಸ್ಥಾನ, ಏಳು ದ್ವಿತೀಯ ಹಾಗೂ ಎರಡು ತೃತೀಯ ಬಹುಮಾನಗಳನ್ನು ಪಡೆದು ಸರಕಾರಿ ಪದವಿ ಪೂರ್ವ ಕಾಲೇಜು ಸುಳ್ಯ ಸಮಗ್ರ ಪ್ರಶಸ್ತಿ ಪಡೆದಿದೆ. ಕನ್ನಡ ಭಾಷಣದಲ್ಲಿ ಸೃಷ್ಟಿ ಕೆ.ಎಸ್, ಹಿಂದಿ ಭಾಷಣದಲ್ಲಿ ಪೌರ್ಣಮಿ, ಚರ್ಚಾ ಸ್ಪರ್ಧೆಯಲ್ಲಿ ಸೃಜನಾದಿತ್ಯಶೀಲ, ಛದ್ಮ ವೇಷದಲ್ಲಿ ಕೃತಿಕಾ ಬಿ.ಯನ್. ಜನಪದ ಗೀತೆಯಲ್ಲಿ ಸನ್ನಿಧಿ ಕೆ.ವಿ. ಸಂಸ್ಕೃತ ಧಾರ್ಮಿಕ ಪಠಣದಲ್ಲಿ ಸ್ವಸ್ತಿ ಹೆಚ್.ಆರ್., ಕವನ ವಾಚನದಲ್ಲಿ ಗ್ರೀಷ್ಮ ಕೆ.ಎಸ್. ಜನಪದ ನೃತ್ಯದಲ್ಲಿ ಸನ್ನಿಧಿ ಕೆ.ವಿ. ಮತ್ತು ತಂಡ, ಕವ್ವಾಲಿಯಲ್ಲಿ ನಸೀದ್ ಫರಾಜ್ ಮತ್ತು ತಂಡ ಹೀಗೆ 9 ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಅದೇ ರೀತಿ ರಂಗೋಲಿಯಲ್ಲಿ ಶಾಂಭವಿ ಬಡಿಗೇರ, ಮಿಮಿಕ್ರಿಯಲ್ಲಿ ತರುಣ್ ರಾಜ್, ಭಾವಗೀತೆಯಲ್ಲಿ ಅಶ್ವಿತಾ ಎಂ.ಬಿ. ಭರತನಾಟ್ಯದಲ್ಲಿ ಜೀವಿಕ, ಗಝಲ್ ನಲ್ಲಿ ನಸೀದ್ ಫರಾಜ್, ರಸಪ್ರಶ್ನೆಯಲ್ಲಿ ದಿಶಾನ್ ಕೊಯಿಂಗಾಜೆ ಮತ್ತು ಸೃಷ್ಟಿ ಹೀಗೆ ಒಟ್ಟು ಏಳು ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ. ಇಂಗ್ಲೀಷ್ ಭಾಷಣದಲ್ಲಿ ಸುರಯ್ಯ, ಆಶುಭಾಷಣದಲ್ಲಿ ಅಮೃತ ತೃತೀಯ ಸ್ಥಾನ ಪಡೆದಿರುತ್ತಾರೆ.