ಗುರು ನಮನ

0

ಶಾಲೆಯನ್ನು ಮನೆಯಂತೆ ನೋಡಿಕೊಂಡ ಶಿಕ್ಷಕಿ

ಕಾವ್ಯ ಕೆ. ಕೊರಪ್ಪಣೆ

ನನ್ನ ನೆಚ್ಚಿನ ಶಿಕ್ಷಕಿಯಾದ ಶಾಲಿನಿ ಮೇಡಂ. ಇವರು ನನಗೆ ೧ರಿಂದ೫ನೇ ತರಗತಿಯ ವರೆಗೆ ಪಾಠ ಮಾಡಿದ್ದಾರೆ. ಇವರು ೧ರಿಂದ೨ನೇ ತರಗತಿಗೆ ಇಂಗ್ಲಿಷ್ ಮತ್ತು ಗಣಿತ ಪಾಠ ಮಾಡುತ್ತಿದ್ದರು.೩,೪,೫ ತರಗತಿಗೆ ಗಣಿತ ಪಾಠ ಮಾಡುತ್ತಿದ್ದರು.ಇಂದಿಗೂ ಹೀಗೆ ಮುಂದುವರೆದಿದೆ. ಇವರೆಂದರೆ ನನಗೆ ಬಹಳ ಅಚ್ಚು ಮೆಚ್ಚು.ಇವರ ಸ್ವಭಾವ ಮೃದು . ಇವರು ಯಾವಾಗಲೂ ನಗುಮುಖದಿಂದ ಇರುತ್ತಾರೆ. ಇವರನ್ನು ಕಂಡರೆ ಎಲ್ಲಾ ಮಕ್ಕಳಿಗೆ ತುಂಬಾ ಇಷ್ಟ.ಇವರು ಎಲ್ಲಾ ಮಕ್ಕಳನ್ನು ತನ್ನ ಮಕ್ಕಳಂತೆ ನೋಡಿಕೊಳ್ಳುತ್ತಾರೆ.ಇವರಿಗೆ ಅಚ್ಚು ಮೆಚ್ಚಿನ ಶಿಕ್ಷಕಿ ಎಂಬ ರಾಜ್ಯ ಪ್ರಶಸ್ತಿ ದೊರೆತಿದೆ.ಇದು ನನಗೆ ಹೆಮ್ಮೆಯ ವಿಷಯ. ಇವರು ಶಾಲೆಯನ್ನು ತನ್ನ ಮನೆಯಂತೆ ನೋಡಿಕೊಳ್ಳುತ್ತಾರೆ.ಇವರ ಪರಿಶ್ರಮದಿಂದ ಶಾಲೆಗೆ ಹಸಿರು ಮತ್ತು ಹಳದಿ ಶಾಲೆ ಎಂಬ ಬಿರುದು ದೊರಕಿದೆ.


ಆಸಕ್ತಿ ಇರುವ ಮಕ್ಕಳನ್ನು ಪ
ಪ್ರತಿಭಾ ಕಾರಂಜಿಗೆ ಆಯ್ಕೆ ಮಾಡಿ ಕರೆದುಕೊಂಡು ಹೋಗುತ್ತಾರೆ. ಮೇಲು ., ಕೀಳೆಂಬ ಭಾವನೆ ಇಲ್ಲದೆ ಮಕ್ಕಳಿಗೆ ಆಧಾರ್ ಕಾರ್ಡ್ ಮಾಡಿಸುವುದು,ಸಮವಸ್ತ್ರ ಇಲ್ಲದ ಮಕ್ಕಳಿಗೆ ಹೊಲಿಸಿ ಕೊಡುವುದು, ಬರೆಯಲು ಪೆನ್ನು, ಪೆನ್ಸಿಲ್, ಪುಸ್ತಕ ಇತ್ಯಾದಿಗಳನ್ನು ತಂದುಕೊಡುತ್ತಾರೆ.ತನ್ನ ಸಹಶಿಕ್ಷಕಿಯರನ್ನು ಒಡಹುಟ್ಟಿದ ತಂಗಿಯಂತೆ ಕಾಣುತ್ತಾರೆ.ಮಕ್ಕಳ ಪೋಷಕರನ್ನು ಬಂಧುಗಳಂತೆ ಕಾಣುತ್ತಾರೆ.

ಶಿಕ್ಷಕರನ್ನು ಗುರು ಎನ್ನುತ್ತಾರೆ. ಅದೇ ರೀತಿ ಗುರು ಶಿಷ್ಯರ ಸಂಬಂಧ ಹಾಲು ಜೇನಿನಂತೆ.ಎಂದಿಗೂ ತಾಯಿಯ ಋಣ ತೀರಿಸಲು ಸಾಧ್ಯವಿಲ್ಲ,ಅದೇ ರೀತಿ
ಗುರುಗಳ ಋಣ ತೀರಿಸಲು ಸಾಧ್ಯವಿಲ್ಲ.

ಕಾವ್ಯ ಕೆ
ಕೊರಪ್ಪಣೆ ಮನೆ
ಬಳ್ಪ