ಸುಳ್ಯದ ಸೈಂಟ್ ಜೋಸೆಫ್ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ

0


ಸುಳ್ಯ ಸಂತ ಜೋಸೆಫ್ ಶಾಲೆ ಯಲ್ಲಿ ಪೋಷಕರ ಹಾಗೂ ಹಿರಿಯ ವಿದ್ಯಾರ್ಥಿಗಳ ಸಂಘದ ವತಿಯಿಂದ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಶಿಕ್ಷಕರಿಗೆ, ಆಡಳಿತ ಮಂಡಳಿ ಯವರಿಗೆ, ಭೋದಕೇತರ ಸಿಬ್ಬಂದಿಗಳಿಗೆ ಹಲವಾರು ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನ ವಿತರಿಸಲಾಯಿತು.


ಪೋಷಕರ ಸಂಘದ ಅಧ್ಯಕ್ಷ ಜೆ ಕೆ ರೈ, ಗುರುಸ್ವಾಮಿ, ಗುರುಪ್ರಸಾದ ರೈ, ಧನ್ಯ, ಉಷಾ, ಶಿವಕುಮಾರ್,ಶೋಭಿತ, ವತ್ಸಲ, ವಿದ್ಯಾ, ಉದಯ, ಜೆನೆಟ್, ವನಿತಾ, ಸಲಾಮ್, ಪ್ರೇಮ, ಅಕ್ಷತಾ, ಖಾದರ್ ಹಿರಿಯ ವಿದ್ಯಾರ್ಥಿ ಸಂಘ ದ ಆದರ್ಶ್, ನಿಹಾಲ್ ಮತ್ತಿತರರು ಉಪಸ್ಥಿತರಿದ್ದರು.


ಶಾಲಾ ಎಲ್ಲಾ ಶಿಕ್ಷಕರನ್ನು, ಸಿಬ್ಬಂದಿಗಳನ್ನು ಈ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಶಾಲಾ ಸಂಚಾಲಕರಾದ ರೆ ಫಾ. ವಿಕ್ಟರ್ ಡಿ ಸೋಜ ಮತ್ತು ಮುಕ್ಯೋಪಾಧ್ಯಾಯಿನಿ ಸಿಸ್ಟರ್ ಬಿನೋಮ ಸನ್ಮಾನಕ್ಕೆ ಕೃತಜ್ಞತೆ ಅರ್ಪಿಸಿದರು.
ಪೋಷಕರ ಸಂಘ ದ ಅಧ್ಯಕ್ಷ ಜೆ ಕೆ ರೈ ಅಧ್ಯಕ್ಷತೆ ವಹಿಸಿದ್ದರು. ಗುರುಸ್ವಾಮಿ ಸ್ವಾಗತಿಸಿ, ಗುರುಪ್ರಸಾದ್ ರೈ ವಂದಿಸಿದರು. ಉಷಾ ಮತ್ತು ವಿದ್ಯಾ ಕಾರ್ಯಕ್ರಮ ನಿರೂಪಿಸಿದರು.