ತಾಲೂಕಿನ ಎಂಟು‌ ಗ್ರಾ.ಪಂ.ಗಳಿಗೆ ಲ್ಯಾಪ್ ಟಾಪ್ ಕೊಡುಗೆ

0

ಕರ್ನಾಟಕ ಸರಕಾರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ , ಶಿಕ್ಷಣ ಫೌಂಡೇಶನ್ ಮತ್ತು ಡೆಲ್ ಟೆಕ್ನಲಾಜಿ ಇದರ ಸಹಾಭಾಗಿತ್ವದಲ್ಲಿ ಜಂಟಿಯಾಗಿ ಗ್ರಾಮ ಪಂಚಾಯತ್ ಗ್ರಂಥಾಲಯದಲ್ಲಿ ನಡೆಯುತ್ತಿರುವ ಗ್ರಾಮ ಡಿಜಿ ವಿಕಸನ ಕಾರ್ಯಕ್ರಮ ದಡಿ ಆಯ್ಕೆಯಾದ ಸುಳ್ಯ ತಾಲೂಕಿನ ಎಂಟು ಗ್ರಾಮ ಪಂಚಾಯತ್ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರ ಗಳಿಗೆ ಲ್ಯಾಪ್‌ಟಾಪ್/ ಮೋನಿಟರ್ ಕೊಡುಗೆಯಾಗಿ ನೀಡುವ ಕಾರ್ಯಕ್ರಮದಲ್ಲಿ ಸೆ.5 ರಂದು ಸುಳ್ಯ ತಾ.ಪಂ. ನಲ್ಲಿ ನಡೆಯಿತು.

ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಕು ಭಾಗೀರಥಿ ಮುರುಳ್ಯ ರವರು ಲ್ಯಾಪ್ ಟಾಪ್ ಹಸ್ತಾಂತರಿಸಿ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ತಾ.ಪಂ.ಇಓ ರಾಜಣ್ಣ, ಗ್ರಾಮ ಡಿಜಿ ವಿಕಸನದ ಜಿಲ್ಲಾ ಸಂಯೋಜಕ ಲವೀಶ್ ಕುಮಾರ್ ತಾ. ಸಂಯೋಜಕ ದಿನೇಶ್, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಗ್ರಂಥಾಲಯ ಮೇಲ್ವಿಚಾರಕರು, ಅಧ್ಯಕ್ಷರು, ತಾ.ಪಂ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.

ಗುತ್ತಿಗಾರು ಗ್ರಾಮ ಪಂಚಾಯತಿ ಮೇಲ್ವಿಚಾರಕರು ಸ್ವಾಗತಿಸಿದರು. ಜಿಲ್ಲಾ ಸಂಯೋಜಕರು ನಿರೂಪಿಸಿ ಧನ್ಯವಾದ ತಿಳಿಸಿದರು.