ಪರಿವಾರಕಾನ ಬಳಿ ಗೂಡ್ಸ್ ವ್ಯಾನಿಗೆ ಡಿಕ್ಕಿ ಹೊಡೆದ ಬೊಲೆರೋ

0

ಸುಳ್ಯದ ಪರಿವಾರಕಾನದ ಬಳಿ ಗೂಡ್ಸ್ ವಾಹನಕ್ಕೆ ಬೊಲೆರೋ ವಾಹನ ಹಿಂದಿನಿಂದ ಡಿಕ್ಕಿ ಹೊಡೆದು ಎರಡೂ ವಾಹನಗಳು ಜಖಂಗೊಂಡ ಘಟನೆ ಇಂದು ವರದಿಯಾಗಿದೆ.


ಸುಳ್ಯದಿಂದ ಕಲ್ಲುಗುಂಡಿಯತ್ತ ಹೋಗುತ್ತಿದ್ದ ಗೂಡ್ಸ್ ವಾಹನ ಪರಿವಾರಕಾನದ ಬಳಿ ನಿಲ್ಲಿಸಲು ಮುಂದಾದ ಸಂದರ್ಭ ಅದೇ ರಸ್ತೆಯಲ್ಲಿ ಹಿಂದಿನಿಂದ ಬಂದ ಬೊಲೆರೋ ಜೀಪು ಗೂಡ್ಸ್ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಘಟನೆಯಿಂದ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.