ಅರಂಬೂರು ಮೂಕಾಂಬಿಕಾ ಭಜನಾ ಮಂದಿರದಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿ ಆಚರಣೆ

0

ಭಗವದ್ಗೀತೆ ಕಂಠಪಾಠ ಸ್ಪರ್ಧೆಯ ಆಯೋಜನೆ

ಆಲೆಟ್ಟಿ ಗ್ರಾಮದ ಅರಂಬೂರು ಶ್ರೀ ಮೂಕಾಂಬಿಕಾ ಭಜನಾ ಮಂದಿರದ ವಠಾರದಲ್ಲಿ ವರ್ಷಂಪ್ರತಿ ಜರುಗುವ ಶ್ರೀ ಕೃಷ್ಣ ಜನಾಷ್ಠಮಿ ಯು ಸೆ.6 ರಂದು ಭಕ್ತಿ ಸಂಭ್ರಮದಿಂದ ಜರುಗಿತು. ಬೆಳಗ್ಗೆ ಸಾರ್ವಜನಿಕರಿಗಾಗಿ ಮಡಕೆ ಒಡೆಯುವ ಸ್ಪರ್ಧೆಯನ್ನು ಪುರುಷರಿಗೆ ಮತ್ತು ಮಹಿಳೆಯರಿಗೆ ಪ್ರತ್ಯೇಕ‌ವಾಗಿ ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ವಿಶೇಷವಾಗಿ ಹಿಂದೂ ಧರ್ಮದ ಪವಿತ್ರ ಗ್ರಂಥಭಗವದ್ಗೀತೆಯ 18 ಅಧ್ಯಾಯಗಳ ಕಂಠ ಪಾಠ ಸ್ಪರ್ಧೆಯು ನಡೆಯಿತು. ಮಕ್ಕಳು ಉತ್ಸುಕತೆಯಿಂದ ಭಾಗವಹಿಸಿದರು. ಬಳಿಕಭಕ್ತಿ ಗೀತೆ ಸ್ಪರ್ಧೆ ಮಕ್ಕಳಿಗೆ ,

ಪುರುಷರಿಗೆ, ಮಹಿಳೆಯರಿಗೆ ಪ್ರತ್ಯೇಕ‌ವಾಗಿ ನಡೆಯಿತು.ಅಪರಾಹ್ನ ಪುಟಾಣಿ ಮಕ್ಕಳಿಗೆ ಶ್ರೀ ಕೃಷ್ಣ ಹಾಗೂ ರಾಧೆಯ ವೇಷ ಸ್ಪರ್ಧೆಯು ಆಕರ್ಷಕ ವಾಗಿ ನಡೆಯಿತು.ಅಲ್ಲದೇ ಸಾರ್ವಜನಿಕರಿಗೆ ವಿವಿಧಆಟೋಟ ಸ್ಪರ್ಧೆಗಳು ನಡೆದು ಸಮಾರೋಪ ಸಮಾರಂಭದಲ್ಲಿ ವಿಜೇತ ರಿಗೆ ಬಹುಮಾನ ವಿತರಿಸಲಾಯಿತು.ರಾತ್ರಿ ಭಜನಾ ಮಂದಿರದಲ್ಲಿ ಶ್ರೀ ಕೃಷ್ಣಾರಾಧನಾ ಭಜನಾ ‌ಕಾರ್ಯಕ್ರಮವು ಸಂಘದ ಸದಸ್ಯರಿಂದ ನಡೆಯಿತು. ಬಳಿಕ ಮಹಾಪೂಜೆಯಾಗಿ

ಮಂಗಳಾರತಿಯೊಂದಿಗೆವಭಜನಾ ಸಂಕೀರ್ತನೆ ಸಂಪನ್ನಗೊಂಡು ಆಗಮಿಸಿದ ಎಲ್ಲಾ ಭಕ್ತಾದಿಗಳಿಗೆ ಪ್ರಸಾದ ವಿತರಣೆಯಾಯಿತು. ಭಜನಾ ಮಂದಿರದ ಹಾಗೂ ಸಮಿತಿಯ ಅಧ್ಯಕ್ಷರು ಪದಾಧಿಕಾರಿಗಳು ಮತ್ತು ಸದಸ್ಯರು ಸಹಕರಿಸಿದರು. ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸಿದ್ದರು.