ಸುಳ್ಯದಲ್ಲಿ ಬೈಕ್ – ಬೈಕ್ ನಡುವೆ ಡಿಕ್ಕಿ, ಸವಾರನಿಗೆ ಗಾಯ

0

ಪಕ್ಕದಲ್ಲಿ ನಿಂತಿದ್ದ ಒಮಿನಿ ಹಿಂಭಾಗ ಜಖಂ

ಬೈಕ್ – ಬೈಕ್ ನಡುವೆ ಡಿಕ್ಕಿ ಸಂಭವಿಸಿ ಸವಾರ ಗಾಯಗೊಂಡ ಘಟನೆ ಸುಳ್ಯದ ಜ್ಯೋತಿ ಸರ್ಕಲ್ ಬಳಿ ಇಂದು ಸಂಜೆ (ಸೆ. 12) ಸಂಭವಿಸಿದೆ.

ಬೈಕ್ ಅಪಘಾತವಾದ ರಭಸಕ್ಕೆ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಓಮಿನಿ ಕಾರ್ ನ ಹಿಂಭಾಗ ಜಖಂಗೊಂಡಿದೆ.

ಸುಳ್ಯ ಅಗ್ನಿಶಾಮಕ ಠಾಣೆಗೆ ಸೇರಿದ ಸಿಬ್ಬಂದಿಯೋರ್ವರು ಜ್ಯೋತಿ ವೃತ್ತದ ಬಳಿ ಇರುವ ಬಸ್ಸು ನಿಲ್ದಾಣದ ಪಕ್ಕ ತಮ್ಮ ಓಮಿನಿ ಕಾರನ್ನು ನಿಲ್ಲಿಸಿ ಹೂ ತರಲೆಂದು ಪಕ್ಕದ ಹೂವಿನ ಅಂಗಡಿಗೆ ತೆರಳಿದ್ದರು.


ಈ ಸಂದರ್ಭದಲ್ಲಿ ಹಳೆ ಗೇಟು ಭಾಗದಿಂದ ಬರುತ್ತಿದ್ದ ಶೈನ್ ದ್ವಿಚಕ್ರವಾಹನ ಸುಳ್ಯ ಕಡೆಯಿಂದ ಬರುತ್ತಿದ್ದ ಬುಲೆಟ್ ವಾಹನಕ್ಕೆ ಏಕಾಏಕಿ ಅಡ್ಡ ಬಂದಿದ್ದು , ಬುಲೆಟ್ ಸವಾರ ನಿಯಂತ್ರಣ ತಪ್ಪಿ ಅಲ್ಲಿ ನಿಂತಿದ್ದ ಓಮಿನಿ ವಾಹನದ ಹಿಂಭಾಗಕ್ಕೆ ಗುದ್ದಿದ್ದು ಘಟನೆಯಿಂದ ಬುಲೆಟ್ ಸವಾರನಿಗೆ ಗಾಯಗಳಾಗಿದೆ. ಸ್ಥಳೀಯರು ಆತನನ್ನು ಸುಳ್ಯ ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.