ಮಂಡೆಕೋಲಿನಲ್ಲಿ ಗಣೇಶೋತ್ಸವ

0

ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಮಂಡೆಕೋಲು ಹಾಗೂ ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂದಿರ ಮಂಡೆಕೋಲು ಇದರ ಆಶ್ರಯದಲ್ಲಿ ೧೬ ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಆಚರಣೆ ಸೆ.೧೮ ಮತ್ತು ೧೯ರಂದು ನಡೆಯಿತು.

ಸೆ.೧೮ರಂದು ಸಂಜೆ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ. ರಾತ್ರಿ ಸಭಾ ಕಾರ್ಯಕ್ರಮ. ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ. ರಾತ್ರಿ ಭಕ್ತಿ ರಸಮಂಜರಿ ಸುಶ್ರಾವ್ಯ ಮೆಲೋಡಿಸ್ ಇವರಿಂದ . ಬಳಿಕ ಸ್ಥಳೀಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಸೆ.೧೯ರಂದು ಬೆಳಗ್ಗೆ ಶ್ರೀ ಗಣಪತಿ ಹೋಮ ಮತ್ತು ಶ್ರೀ ದೇವರ ಪ್ರತಿಷ್ಠೆ. ಭಜನಾ ಕಾರ್ಯಕ್ರಮದಲ್ಲಿ ೧೦೮ ಕ್ಕಿಂತ ಮೇಲ್ಪಟ್ಟು ಭಜಕರಿಂದ ಏಕಕಾಲದಲ್ಲಿ ಸಾಮೂಹಿಕ ಭಜನಾ ಸೇವೆ. ಬೆಳಗ್ಗೆ ಶ್ರೀ ಮಹಾದೇವಿ ಭಜನಾ ಮಂದಿರ ಮಡಿವಾಳಮೂಲೆ, ಶ್ರೀ ಮಹಾಲಿಂಗೇಶ್ವರ ಭಜನಾ ಮಂಡಳಿ ಅಡೂರು ಇವರಿಂಸ ನಡೆಯಿತು. ಬಳಿಕ ಶಾಲಾ ಮಕ್ಕಳ ಹಾಗೂ ಸಾರ್ವಜನಿಕರಿಂದ ವಿವಿಧ ಸ್ಪರ್ಧಾ ಕಾರ್ಯಕ್ರಮ ನಡೆಯಿತು.

ಬೆಳಗ್ಗೆ ೧೦ ಕ್ಕೆ ಭಕ್ತಿ ಗಾನ ಸುಧಾ ಉದಯನ್ ವಿಶ್ವಕರ್ಮ ಮುರೂರು ಮತ್ತು ಬಳಗದವರಿಂದ ಮಧ್ಯಾಹ್ನ ಮಹಾಪೂಜೆ ಬಳಿಕ ಅನ್ನಸಂತರ್ಪಣೆ ನಡೆಯುವುದು. ಮಧ್ಯಾಹ್ನ ೨ ರಿಂದ ಶಾಸ್ತ್ರೀಯ ಸಂಗೀತ ವಿಶ್ವಾಸ್ ಆಚಾರ್ ಪೆರಾಜೆ ಮತ್ತು ಬಳಗದವರಿಂದ. ಮಧ್ಯಾಹ್ನ ೩ ರಿಂದ ಬಹುಮಾನ ವಿತರಣೆ ಮತ್ತು ಲಕ್ಕಿಡಿಪ್ ಡ್ರಾ ನಡೆಯುವುದು. ಸಂಜೆ ೪ ರಿಂದ ಮಹಾಪೂಜೆಯ ಬಳಿಕ ವೈಭವದ ಶೋಭಾಯಾತ್ರೆ ನಡೆಯುವುದು.

LEAVE A REPLY

Please enter your comment!
Please enter your name here