ಪರ್ಮಿಷನ್ ಇಲ್ಲದೆ ಅಳವಡಿಸಿದ ಡಿ.ಜೆ. ತೆಗೆಯಲು ಪೋಲೀಸರ ಸೂಚನೆ

0

ಬಾಳಿಲ ಸಾರ್ವಜನಿಕ ಗಣೇಶೋತ್ಸವ ಶೋಭಾಯಾತ್ರೆ ವಿಳಂಬ

ಅನುಮತಿ ಇಲ್ಲದೆ ಅಳವಡಿಸಿರುವ ಡಿ.ಜೆ.ಯನ್ನು ತೆಗೆಯಬೇಕೆಂದು ಪೋಲೀಸರು ಸೂಚನೆ ಕೊಟ್ಟ ಹಾಗೂ ಆ ರೀತಿ ಕಾರಣಗಳನ್ನು ನೀಡಿ ಧಾರ್ಮಿಕ ಕಾರ್ಯಕ್ತಮಕ್ಕೆ ಅಡ್ಡಿ ಮಾಡುವುದು ಸರಿಯಲ್ಲವೆಂದು ಹೇಳಿ ಸಂಘಟಕರು ಡಿ.ಜೆ. ತೆಗೆಯಲು ನಿರಾಕರಿಸಿರುವುದರಿಂದ, ಮಹಾಪೂಜೆಯೂ ಆಗದೆ ಶ್ರೀ ಗಣೇಶ ದೇವರ ಶೋಭಾಯಾತ್ರೆ ಆರಂಭಗೊಳ್ಳದಿರುವ ಘಟನೆ ಬಾಳಿಲದಿಂದ ವರದಿಯಾಗಿದೆ.


ಬಾಳಿಲದ ನಾಗರಿಕ ಸೇವಾ ಸಮಿತಿ ವತಿಯಿಂದ ನಡೆಯುತ್ತಿರುವ ಸಾರ್ವಜನಿಕ ಗಣೇಶೋತ್ಸವ ಕೊನೆಯ ಹಂತಕ್ಕೆ ಬಂದಿದ್ದ ಸಂದರ್ಭ ರಾತ್ರಿ 9 ಗಂಟೆ ವೇಳೆಗೆ ಬೆಳ್ಳಾರೆ ಪೋಲೀಸರು ಬಂದು‌, ಡಿ.ಜೆ ಅಳವಡಿಸಬಾರದೆಂದು ಹೇಳಿದ್ದರೂ ಮತ್ತೆ ಅನುಮತಿ ಪಡೆಯದೆ ಡಿ.ಜೆ. ಅಳವಡಿಸಿರುವುದರಿಂದ ಅದನ್ನು ತೆಗೆಯಬೇಕೆಂದು ಹೇಳಿದರೆನ್ನಲಾಗಿದೆ. ” ಇನ್ನೇನು ಮಹಾಪೂಜೆ ಮುಗಿದು ಶೋಭಾಯಾತ್ರೆ ನಡೆಯುತ್ತದೆ. ಆದ್ದರಿಂದ ಡಿ.ಜೆ. ಸ್ಥಗಿತಗೊಳಿಸಬೇಡಿ. ಬೇಕಿದ್ದರೆ ಸೌಂಡ್ ಕಡಿಮೆ ಮಾಡುತ್ತೇವೆ” ಎಂದು ಸಂಘಟಕರು ಹೇಳಿದರೂ ಪೋಲೀಸರು ಒಪ್ಪಲಿಲ್ಲವೆನ್ನಲಾಗಿದೆ. ಅದಕ್ಕಾಗಿ ಸಂಘಟಕರು ಮಹಾಪೂಜೆ ನೆರವೇರಿಸದೆ ಕಾಯುತ್ತಿದ್ದಾರೆಂದು ತಿಳಿದುಬಂದಿದೆ. ಸ್ಥಳಕ್ಕೆ ಬಿ.ಜೆ.ಪಿ. ಅಧ್ಯಕ್ಷ ಹರೀಶ್ ಕಂಜಿಪಿಲಿ ಬಂದಿದ್ದಾರೆನ್ನಲಾಗಿದೆ.