ಬಾಳಿಲ ಗಣೇಶೋತ್ಸವ ಮೆರವಣಿಗೆಯಲ್ಲಿ ಡಿ.ಜೆ. ತೆಗೆಯಲು ಪೋಲೀಸರ ಸೂಚನೆ

0

ಒಪ್ಪದ ಸಂಘಟಕರು ಮತ್ತು ಭಕ್ತರು

ಭಾಗೀರಥಿ, ಕಂಜಿಪಿಲಿ ಆಗಮನ

ಪೋಲೀಸ್ ಒಪ್ಪಿಗೆಯ ಬಳಿಕ ಒಂದು ಗಂಟೆ ವಿಳಂಬವಾಗಿ ಶೋಭಾಯಾತ್ರೆ

ಅನುಮತಿ ಇಲ್ಲದೆ ಅಳವಡಿಸಿರುವ ಡಿ.ಜೆ. ಮತ್ತು ಕಲರಿಂಗ್ ಲೈಟನ್ನು ತೆಗೆಯಬೇಕೆಂದು ಪೋಲೀಸರು ಸೂಚನೆ ಕೊಟ್ಟ ಹಾಗೂ ಆ ರೀತಿ ಕಾರಣಗಳನ್ನು ನೀಡಿ ಧಾರ್ಮಿಕ ಕಾರ್ಯಕ್ರಮಕ್ಕೆ ಅಡ್ಡಿ ಮಾಡುವುದು ಸರಿಯಲ್ಲವೆಂದು ಹೇಳಿ ಸಂಘಟಕರು ಡಿ.ಜೆ. ತೆಗೆಯಲು ನಿರಾಕರಿಸಿದ ಘಟನೆ ಶಾಸಕರ ಮತ್ತು ಬಿ.ಜೆಪಿ. ಅಧ್ಯಕ್ಷರ ಮಧ್ಯಪ್ರವೇಶದಿಂದ ಸುಖಾಂತ್ಯಗೊಂಡು ಒಂದು ಗಂಟೆ ವಿಳಂಬವಾಗಿ ಮಹಾಪೂಜೆ ನಡೆದು ಡಿ.ಜೆ. ಸಹಿತವಾಗಿ ಶ್ರೀ ಗಣೇಶನ ಶೋಭಾಯಾತ್ರೆ ನಡೆದ ಘಟನೆ ಬಾಳಿಲದಲ್ಲಿ ನಿನ್ನೆ ನಡೆದಿದೆ.


ಬಾಳಿಲದ ನಾಗರಿಕ ಸೇವಾ ಸಮಿತಿ ವತಿಯಿಂದ ನಡೆಯುತ್ತಿರುವ ಸಾರ್ವಜನಿಕ ಗಣೇಶೋತ್ಸವ ಕೊನೆಯ ಹಂತಕ್ಕೆ ಬಂದಿದ್ದ ಸಂದರ್ಭ ರಾತ್ರಿ 9 ಗಂಟೆ ವೇಳೆಗೆ ಬೆಳ್ಳಾರೆ ಪೋಲೀಸರು ಬಂದು‌, ಡಿ.ಜೆ ಮತ್ತು ವಾಹನಕ್ಕೆ ಅಳವಡಿಸಿದ ಕಲರ್ ಲೈಟನ್ನು ತೆರವುಗೊಳಿಸಬೇಕೆಂದು ಹೇಳಿದರಲ್ಲದೆ, ಬೆಳ್ಳಾರೆ ಠಾಣಾ ಪಿ.ಎಸ್.ಐ ಯವರು ಲೈಟ್ ಕನೆಕ್ಷನ್ ವರಯ್ ಗಳನ್ನು ತಾವೇ ಕಿತ್ತು ತೆಗೆದರೆನ್ನಲಾಗಿದೆ. ಇದನ್ನು ವಿರೋಧಿಸಿದ ಸಂಘಟಕರು, ಕಳೆದ ವರ್ಷವೂ ನಾವು ಡಿ.ಜೆ. ಬಳಸಿದ್ದೆವು. ಪೋಲೀಸರು ಕಾನೂನಿನ ಕಾರಣ ಹೇಳಿ ಧಾರ್ಮಿಕ ಕಾರ್ಯಕ್ರಮಕ್ಕೆ ಅಡ್ಡಿಪಡಿಸುವುದು ಸರಿಯಲ್ಲ ಎಂದು ಹೇಳಿ, ಮಹಾಪೂಜೆ ಕೂಡ ಮಾಡದೆ ಕುಳಿತರು. ಡಿ.ಜೆ. ಹಾಕಲಿಕ್ಕಿಲ್ಲವೆಂದು ಮೊದಲೇ ತಿಳಿಸಿದ್ದೇವೆ. ನಮ್ಮ ಮಾತನ್ನು ಮೀರಿ ನೀವು ಡಿ.ಜೆ. ಹಾಕಿದ್ದು ಸರಿಯಲ್ಲವೆಂದು ಪೋಲೀಸರು ವಾದಿಸಿದರು
ಈ ವಿವಾದ ಶಾಸಕಿ ಭಾಗೀರಥಿ ಮುರುಳ್ಯ ಮತ್ತು ಬಿ.ಜೆ.ಪಿ. ಅಧ್ಯಕ್ಷ. ಹರೀಶ್ ಕಂಜಿಪಿಲಿಯವರಿಗೆ ತಿಳಿದು ಅವರಿಬ್ಬರೂ ಬಾಳಿಲಕ್ಕೆ ಬಂದರು. ಅವರು ಪೋಲೀಸರೊಡನೆ ಮಾತನಾಡಿ ಡಿ.ಜೆ.ಗೆ ಅವರನ್ನು ಒಪ್ಪಿಸಿದರು. ಬಳಿಕ ಮಹಾಪೂಜೆ ನಡೆದು ಮೆರವಣಿಗೆ ಡಿ.ಜೆ. ಸಹಿತವಾಗಿ ನಡೆಯಿತು.