ಅರಂಬೂರು : ಸುಳ್ಯ ರೋಟರಿ ಕ್ಲಬ್ ನ ಅಂಗ ಸಂಸ್ಥೆಯಾದ ರೋಟರಿ ಸಮುದಾಯ ದಳದ ಸಭೆ

0

ಸುಳ್ಯ ರೋಟರಿ ಕ್ಲಬ್ ನ ಅಂಗ ಸಂಸ್ಥೆಯಾದ ರೋಟರಿ ಸಮುದಾಯ ದಳ ಅರಂಬೂರು ಇದರ ಸಭೆಯು ಸಿ.ಎಚ್. ಪ್ರಭಾಕರ್ ನಾಯರ್ ರವರ ಪ್ರಣವಂ ನಿಲಯ ಅರಂಬೂರಿನಲ್ಲಿ ನಡೆಯಿತು.

ರೋಟರಿ ಕ್ಲಬ್ ಸುಳ್ಯ ಇದರ ಅಧ್ಯಕ್ಷರಾದ ಆನಂದ ಗೌಡ ರವರು ಅಧ್ಯಕ್ಷತೆ ವಹಿಸಿದ್ದರು.

ರೋಟರಿ ಸಮುದಾಯದಳದ ಚೇರ್ ಮೆನ್ ಭಾಸ್ಕರ ನಾಯರ್ , ಜಿಲ್ಲಾ ಚೇರ್ ಮೆನ್ ಪ್ರಭಾಕರ್ ನಾಯರ್ ಸ್ವಾಗತ್, ಸಮುದಾಯ ದಳದ ಅಧ್ಯಕ್ಷೆ ಪ್ರೇಮಲತಾ , ಕಾರ್ಯದರ್ಶಿ ಲಲಿತಾ, ರಾಮಚಂದ್ರ ಆಗ್ರೋ , ಹರಿರಾಯ ಕಾಮತ್ , ಪ್ರಭಾಕರ್ ನಾಯರ್ ಸಿ. ಎಚ್., ಎಸ್.ಎಂ. ಬಾಪು ಸಾಹೇಬ್ ಹಾಗೂ ಸಮುದಾಯದಳದ ಸದಸ್ಯರು ಉಪಸ್ಥಿತರಿದ್ದರು.

2023 _24ರ ನೂತನ ಅಧ್ಯಕ್ಷರಾಗಿ ಶ್ರೀಮತಿ ಪ್ರೇಮಲತಾ ರವರನ್ನು ಹಾಗೂ ಕಾರ್ಯದರ್ಶಿಯಾಗಿ ಶ್ರೀಮತಿ ಲಲಿತಾ ರವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಖಜಾಂಚಿಯಾಗಿ ಕೃಷ್ಣ ಮೂರ್ತಿ ಭಟ್ ರವರನ್ನು ಆಯ್ಕೆ ಮಾಡಲಾಯಿತು. ಬೋಜಪ್ಪರವರು ಪ್ರಾರ್ಥಿಸಿದರು, ಲಲಿತಾ ವಂದಿಸಿದರು.