ಆಟೋ‌ ರಿಕ್ಷಾದಲ್ಲಿ ಕರಿಕ್ಕಳಕ್ಕೆ ಔಷಧಿಗೆಂದು ಹೋಗಿ ವಾಪಸ್ಸಾಗುತ್ತಿದ್ದಾಗ ಅಸ್ವಸ್ಥಗೊಂಡ ವ್ಯಕ್ತಿ ಮೃತ್ಯು

0

ಅಸೌಖ್ಯದಿಂದಿದ್ದ ಚೆಂಬು ಗ್ರಾಮ ಅನ್ಯಾಳದ ವ್ಯಕ್ತಿಯೊಬ್ಬರು ಆಟೋ ರಿಕ್ಷಾದಲ್ಲಿ ಪಂಜ ಸಮೀಪದ ಕರಿಕ್ಕಳಕ್ಕೆ ಹೋಗಿ ವಾಪಾಸ್ಸಾಗುತ್ತಿದ್ದಾಗ ರಿಕ್ಷಾದಲ್ಲೆ ಅಸ್ವಸ್ಥಗೊಂಡು ಮೃತಪಟ್ಟ ಘಟನೆ ವರದಿಯಾಗಿದೆ.

ಅನ್ಯಾಳದ ಚಂದ್ರಶೇಖರ ಎಂಬವರು ಅಸೌಖ್ಯದಿಂದಿದ್ದರು. ಅವರು ಔಷಧಿ ಗೆಂದು‌ ಕರಿಕ್ಕಳಕ್ಕೆ ಆಟೋದಲ್ಲಿ ಹೋಗಿದ್ದರೆಂದೂ ಅಲ್ಲಿಂದ ವಾಪಾಸ್ಸಾಗುತ್ತಿದ್ದಾಗ ನಿಂತಿಕಲ್ಲು ಸಮೀಪ ಅವರು ಅಸ್ವಸ್ಥಗೊಂಡು ರಿಕ್ಷಾದಲ್ಲೆ ಅಡ್ಡ ಬಿದ್ದರೆನ್ನಲಾಗಿದೆ. ತಕ್ಷಣ ರಿಕ್ಷಾ ಚಾಲಕ ಹಾಗೂ ಆಟೋದಲ್ಲಿದ್ದ ಮನೆಯವರು ನಿಂತಿಕಲ್ ನಲ್ಲಿ ಕ್ಲಿನಿಕ್ ಗೆ ಕರೆದುಕೊಂಡು ಹೋದರೆಂದೂ ಪರೀಕ್ಷೆ ನಡೆಸಿದ ವೈದ್ಯರು‌ ಚಂದ್ರಶೇಖರ ರು‌ ಮೃತಪಟ್ಟಿರುವುದನ್ನು ದೃಢ ಪಡಿಸಿದರೆಂದು ತಿಳಿದುಬಂದಿದೆ.