














ಕಡಬ ತಾಲುಕಿನ
ಸುಬ್ರಹ್ಮಣ್ಯ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೆ
ಏರಿಸಬೇಕೆಂದು ಸುಬ್ರಹ್ಮಣ್ಯ ತಾ.ಪಂ. ಕ್ಷೇತ್ರದ ನಿಕಟಪೂರ್ವ ಸದಸ್ಯ ಅಶೋಕ್ ನೆಕ್ರಾಜೆಯವರು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಮತ್ತು ವಿಧಾನ ಅಧ್ಯಕ್ಷ ಯು. ಟಿ ಖಾದರ್ ರಿಗೆ ಮನವಿ ಮಾಡಿದ್ದಾರೆ.
ಮನವಿಯಲ್ಲಿ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ದಿನಂಪ್ರತಿ ಸಾವಿರಾರು ಭಕ್ತಾಧಿಗಳು ಬರುತ್ತಿದ್ದಾರಲ್ಲದೆ ಈ ಪ್ರಾಥಮಿಕ ಆರೋಗ್ಯ ಕೇಂದ್ರವು ಎಂಟು ಗ್ರಾಮಗಳನ್ನು ಒಳಗೊಂಡಿದೆ.
ಇಲ್ಲಿಯ ಜನರಿಗೆ ತುರ್ತು ಚಿಕಿತ್ಸೆಗೆ ಸರಿಯಾದ ಆಸ್ಪತ್ರೆಗಳಿಲ್ಲದೆ 40 ಕಿ.ಮೀ. ದೂರದ ಸುಳ್ಯ ಅಥವಾ 60 ಕಿ.ಮೀ ದೂರದ ಪುತ್ತೂರನ್ನು
ಅವಲಂಬಿಸಬೇಕಾಗಿರುತ್ತದೆ. ಇಲ್ಲಿಯ ಜನರ ಮೂಲಭೂತ ಸೌಕರ್ಯವಾದ ಈ
ಆಸ್ಪತ್ರೆಯನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿಸಬೇಕೆಂದು ತಿಳಿಸಿದ್ದಾರೆ. ಮನವಿಗೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆಂದು ಅಶೋಕ್ ನೆಕ್ರಾಜೆ ಸುದ್ದಿಗೆ ತಿಳಿಸಿದ್ದಾರೆ.









