ಮುರುಳ್ಯದ ಕ್ಷೀರಾ ಎಂಟರ್ಪ್ರೈಸಸ್ ಗೆ ಆಫ್ರಿಕಾ ಖಂಡದ ನಿಯೋಗ ಭೇಟಿ

0


ಮಿಲ್ಕ್ ಮಾಸ್ಟರ್ ಕುಟುಂಬದ ಕುಸುಮಾಧರ ಕೇಪಳಕಜೆಯವರು ಅತಿಥಿಗಳಿಗೆ ತಾಂತ್ರಿಕ , ಉತ್ಪನ್ನಗಳ ವ್ಯಾಪಾರ, ಉಪಯೋಗದ ಬಗ್ಗೆ ಮಾಹಿತಿ ನೀಡಿದರು. ಯತೀಶ್ ಪಾಲೊಳಿ, ಶ್ರೀಮತಿ ಲೀಲಾವತಿ ರಾಘವ ಗೌಡ, ಶ್ರೀಮತಿ ಮೈನಾ ಕುಸುಮಾಧರ, ಶ್ರೀಮತಿ ಮಧು ಯತೀಶ್ ಅತಿಥಿಗಳನ್ನು ಬರಮಾಡಿಕೊಂಡರು.
ಕ್ಷೀರ ಎಂಟರ್ಪ್ರೈಸಸ್ ನ ಸಿಬ್ಬಂದಿ ವರ್ಗದವರು ನಿಯೋಗಕ್ಕೆ ಯಂತ್ರಗಳ ಪ್ರಾತ್ಯಕ್ಷಿಕೆ ನೀಡಿ ಸಹಕರಿಸಿದರು. ವಿದೇಶದ ಅತಿಥಿಗಳನ್ನು ಸತ್ಕರಿಸಲಾಯಿತು.

ಮಿಲ್ಕ್ ಕುಮಾರ್ ಖ್ಯಾತಿಯ ಕ್ಷೀರ ಎಂಟರ್ಪ್ರೈಸಸ್ ಗೆ ಆಫ್ರಿಕಾ ಖಂಡದ ತಾಂಜಾನೀಯ ಸಿಯಾರ ಲಿಯೋನೆ ಮತ್ತು ಇಥಿಯೋಪಿಯಾದ 40 ಜನರ ನಿಯೋಗವು ಸೆಲ್ಕೋ ಫೌಂಡೇಶನ್ ನ ಸಹಯೋಗದೊಂದಿಗೆ ಭೇಟಿ ನೀಡಿತು.
ಆಫ್ರಿಕಾ ಖಂಡದ ದೇಶಗಳು ಕ್ಷೀರ ಎಂಟರ್ಪ್ರೈಸಸ್ ಉತ್ಪನ್ನಗಳಲ್ಲಿ ಆಸಕ್ತಿ ತೋರುತ್ತಿದೆ. ಸೆಲ್ಕೋ ಫೌಂಡೇಶನ್ ನ AGM ಗುರುಪ್ರಸಾದ್ ರವರು ನಿಯೋಗದ ಪರಿಚಯ ಮಾಡಿಸಿ ಪರಸ್ಪರ ವಿಚಾರ ವಿನಿಮಯದಲ್ಲಿ ಸಹಕರಿಸಿದರು.