ಪಂಜ ಲಯನ್ಸ್ ಕ್ಲಬ್ ವತಿಯಿಂದ ಯುವ ಸ್ಫೂರ್ತಿ ತರಬೇತಿ ಕಾರ್ಯಗಾರ

0

ಲಯನ್ಸ್ ಕ್ಲಬ್ ಪಂಜ ಇದರ ವತಿಯಿಂದ ಸರಕಾರಿ ಪದವಿ ಪೂರ್ವ ಕಾಲೇಜು ಪಂಜ, ಇಲ್ಲಿಯ ವಿದ್ಯಾರ್ಥಿಗಳಿಗೆ ಯುವ ಸ್ಪೂರ್ತಿ ತರಬೇತಿ ಕಾರ್ಯಗಾರ ಕಾರ್ಯಕ್ರಮ ನಡೆಯಿತು, ತರಬೇತುದಾರರಾಗಿ ಜೇಸಿಐ ವಲಯ ತರಬೇತುದಾರ ಸವಿತಾರ ಮುಡೂರು ರವರು ನಡೆಸಿಕೊಟ್ಟರು. ಪಂಜ ಲಯನ್ಸ್ ಕ್ಲಬ್ ಅಧ್ಯಕ್ಷ ಲl ದಿಲೀಪ್ ಬಾಬ್ಲುಬೆಟ್ಟು ಸಭಾಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಕಾಲೇಜಿನ ಪ್ರಾಂಶುಪಾಲರ ವೆಂಕಪ್ಪ ಗೌಡ ಕೇನಾಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಲl ಪುರಂದರ ಗೌಡ ರವರು ಅತಿಥಿಗಳನ್ನು ವೇದಿಕೆಗೆ ಆಹ್ವಾನಿಸಿದರು.ಲl ಸುರೇಶ್ ನಡ್ಕ ಸ್ವಾಗತಿಸಿದರು.ಕಾರ್ಯದರ್ಶಿ ಲl ವಾಸುದೇವ ಮೇಲ್ಪಾಡಿ ವಂದಿಸಿದರು.
ಈ ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ನ ಪೂರ್ವಾ ದ್ಯಕ್ಷರಾದ ಲl ಮಾಧವ ಗೌಡ ಜಾಕೆ, ಲl ಶ್ರೇಯoಸ್ ಕುಮಾರ್, ನಿಕಟಪೂರ್ವ ಅಧ್ಯಕ್ಷ ಲlಪುರುಷೋತ್ತಮ ದಂಬೆಕೋಡಿ, ಲl ಬಾಲಕೃಷ್ಣ ಗೌಡ ಮೂಲೆಮನೆ, ಲl ಶಶಿಧರ ಪಳಂಗಾಯ, ಲl ನಾಗೇಶ್,ಕೋಶಾಧಿಕಾರಿ ಲl ಆನಂದ ಗೌಡ ಉಪಸ್ಥಿತರಿದ್ದರು.