ಅ.4 : ನೆಲ್ಲೂರು ಕೆಮ್ರಾಜೆ, ಮರ್ಕಂಜದ ವಿಜಯ ಗ್ರಾಮಾಭಿವೃದ್ಧಿ ಸಮಿತಿಯ ಉದ್ಘಾಟನೆ

0

ಕೃಷಿಕರಿಗೆ ಪರ್ಯಾಯ ಕೃಷಿಯಲ್ಲಿ ವಿವಿಧ ಹಣ್ಣುಗಳ‌‌ ಬೆಳೆಯ ಬಗ್ಗೆ ಮಾಹಿತಿ

ವಿವಿಧ ಹಣ್ಣು ಬೆಳೆಗಳ ತಜ್ಞ ಅನಿಲ್ ಬಳಂಜರವರಿಂದ ಮಾಹಿತಿ

ಸುದ್ದಿ ಕೃಷಿ ಸೇವಾ ಕೇಂದ್ರ, ನೆಲ್ಲೂರು ಕೆಮ್ರಾಜೆ ಮತ್ತು ಮರ್ಕಂಜ ಪಂಚಾಯತ್ ಸೊಸೈಟಿ ಹಾಗೂ ರೆಂಜಾಳ ಶಾಸ್ತಾವು ಯುವಕ ಮಂಡಲದ ಸಹಯೋಗ

ಬ್ಯಾಂಕ್ ಆಫ್ ಬರೋಡ
ವಿಜಯ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ ಮಂಗಳೂರು, ಸುದ್ದಿ ಕೃಷಿ ಸೇವಾ ಕೇಂದ್ರ ಸುಳ್ಯ, ನೆಲ್ಲೂರು ಕೆಮ್ರಾಜೆ ಪ್ರಾ.ಕೃ.ಪ.ಸ.ಸಂಘ, ಮರ್ಕಂಜ ಪ್ರಾ.ಕೃ.ಪ.ಸ.ಸಂಘ, ಸುದ್ದಿ ಕೃಷಿ ಸೇವಾ ಕೇಂದ್ರ, ಸುಳ್ಯ, ನೆಲ್ಲೂರು ಕೆಮ್ರಾಜೆ‌ ಗ್ರಾಮ ಪಂಚಾಯತ್, ಮರ್ಕಂಜ ಗ್ರಾಮ‌ ಪಂಚಾಯತ್ , ಶಾಸ್ತಾವು ಯುವಕ ಮಂಡಲ ರೆಂಜಾಳ
ಇದರ ನೇತೃತ್ವದಲ್ಲಿ ಮರ್ಕಂಜ ಮತ್ತು‌ ನೆಲ್ಲೂರು ಕೆಮ್ರಾಜೆ ಗ್ರಾಮಗಳನ್ನೊಳಗೊಂಡ ವಿಜಯ ಗ್ರಾಮಾಭಿವೃದ್ಧಿ ‌ಸಮಿತಿಯ ಉದ್ಘಾಟನೆ ಹಾಗೂ
ಪರ್ಯಾಯ ಕೃಷಿಯಲ್ಲಿ ಹಣ್ಣಿನ ಗಿಡ ಬೆಳೆಯುವ ತರಬೇತಿ ಮತ್ತು ಮಾರುಕಟ್ಟೆಯ ಮಾಹಿತಿ ಕಾರ್ಯಾಗಾರ ಅ.4ರಂದು ಶ್ರೀ ವಿನಾಯಕ‌ ಸಭಾಭವನ ರೆಂಜಾಳ, ಮರ್ಕಂಜ ಇಲ್ಲಿ‌ ನಡೆಯಲಿದೆ.

ಅಧ್ಯಕ್ಷತೆಯನ್ನು ಸಚಿನ್ ಹೆಗ್ಡೆ
ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು
ವಿಜಯ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ ಮಂಗಳೂರು ಇವರು ವಹಿಸಲಿದ್ದಾರೆ.
ಉದ್ಘಾಟನೆಯನ್ನು ದೇವಿಪ್ರಸಾದ್ ಶೆಟ್ಟಿ, ಪ್ರಾದೇಶಿಕ ವ್ಯವಸ್ಥಾಪಕರು, ಬ್ಯಾಂಕ್ ಆಫ್ ಬರೋಡ ಪುತ್ತೂರು ಕ್ಷೇತ್ರ ಇವರು ನೆರವೇರಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಡಾ.ಯು.ಪಿ.ಶಿವಾನಂದ
ಆಡಳಿತ ನಿರ್ದೇಶಕರು, ಸುದ್ದಿ ಸಮೂಹ ಸಂಸ್ಥೆ, ರಮೇಶ್ ದೇಲಂಪಾಡಿ, ಅಧ್ಯಕ್ಷರು, ಪ್ರಾ.ಕೃ.ಪ.ಸ.ಸಂಘ‌ ಮರ್ಕಂಜ, ವಿಷ್ಣು ಭಟ್ ಮೂಲೆತೋಟ
ಅಧ್ಯಕ್ಷರು, ಪ್ರಾ.ಕೃ.ಪ.ಸ.ಸಂಘ ನೆಲ್ಲೂರು ಕೆಮ್ರಾಜೆ ಆಗಮಿಸಲಿದ್ದಾರೆ. ಗೌರವ ಉಪಸ್ಥಿತಿಯಲ್ಲಿ : ಶ್ರೀ ಯಶ್ವಿತ್ ಕಾಳಮ್ಮನೆ ಅಧ್ಯಕ್ಷರು,
ವಿಜಯ ಗ್ರಾಮಾಭಿವೃದ್ಧಿ ಸಮಿತಿ, ಜಾಲ್ಸೂರು‌, ಧನಂಜಯ ಕೋಟೆಮಲೆ
ಅಧ್ಯಕ್ಷರು, ನೆಲ್ಲೂರು ಕೆಮ್ರಾಜೆ ಗ್ರಾಮ ಪಂಚಾಯತ್ , ಶ್ರೀಮತಿ ಗೀತಾ ಹೊಸೊಳಿಕೆ ಅಧ್ಯಕ್ಷರು, ಗ್ರಾಮ ಪಂಚಾಯತ್ ಮರ್ಕಂಜ, ಉದಯ ಕುಮಾರ್
ವ್ಯವಸ್ಥಾಪಕರು, ಬ್ಯಾಂಕ್ ಆಫ್ ಬರೋಡ ದೊಡ್ಡತೋಟ ಶಾಖೆ, ರಾಘವ ಗೌಡ ಕಂಜಿಪಿಲಿ
ಅಧ್ಯಕ್ಷರು, ಶ್ರೀ ಕಾವೂರು ಮಹಾವಿಷ್ಣು ವಗೈರೆ ಪಂಚಸ್ಥಾಪನೆಗಳು ಮರ್ಕಂಜ, ಶಶಿಕಾಂತ ಗುಳಿಗಮೂಲೆ
ಅಧ್ಯಕ್ಷರು, ಶಾಸ್ತಾವು ಯುವಕ‌ ಮಂಡಲ, ರೆಂಜಾಳ ಇವರು‌ಗಳು ಭಾಗವಹಿಸಲಿದ್ದಾರೆ. ಪೂರ್ವಾಹ್ನ 11 ರಿಂದ ಅನಿಲ್ ಬಳಂಜ ವಿವಿಧ ಹಣ್ಣಿನ‌ ಬೆಳೆಯ ತಜ್ಞರು ಹಣ್ಣಿನ‌ ಗಿಡಗಳ ಬಗ್ಗೆ ಮಾಹಿತಿಯನ್ನು ನೀಡಲಿದ್ದಾರೆ. ಆಸಕ್ತ ಕೃಷಿಕರು ಭಾಗವಹಿಸಬಹುದೆಂದು ಸಂಘಟಕರು‌ ವಿನಂತಿಸಿದ್ದಾರೆ.‌