ಸುಳ್ಯದಲ್ಲಿ ನಡೆದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಸಿ.ಎಚ್. ಪ್ರಭಾಕರ ನಾಯರ್ ಅವರಿಗೆ ಸನ್ಮಾನ

0

ಗಾಂಧಿ ಜಯಂತಿ ಅಂಗವಾಗಿ ಸುಳ್ಯ ಅಮರ ಸಂಘಟನಾ ಸಮಿತಿ ಹಾಗೂ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ನಡೆದ ” ಒಂದು ಹೆಜ್ಜೆ ಸ್ವಚ್ಛತೆಯ ಕಡೆಗೆ ” ಎಂಬ ಸ್ವಚ್ಛತಾ ಕಾರ್ಯಕ್ರಮದಲ್ಲಿ ಕಳೆದ ಹಲವು ವರ್ಷಗಳಿಂದ ಸುಳ್ಯ ನಗರದಲ್ಲಿ ಸ್ವಚ್ಛತಾ ಕಾರ್ಯ ನಡೆಸುತ್ತಿರುವ ಸಾಮಾಜಿಕ‌ ಧುರೀಣ ಸಿ.ಎಚ್.ಪ್ರಭಾಕರ ನಾಯರ್ ಅವರನ್ನು ಸನ್ಮಾನಿಸಲಾಯಿತು.