ನವೋದಯ ಶಾಲೆಯ 2ನೇ ಸುತ್ತಿನ ಆಯ್ಕೆ ಪಟ್ಟಿ ಪ್ರಕಟ

0

ಬೆಳ್ಳಾರೆ ಜ್ಞಾನದೀಪ ಸಂಸ್ಥೆಯ ಮೂವರು ವಿದ್ಯಾರ್ಥಿಗಳು ಆಯ್ಕೆ

ಜವಾಹರ್ ನವೋದಯ ವಿದ್ಯಾಲಯದ 6ನೇ ತರಗತಿ ಪ್ರವೇಶ ಪರೀಕ್ಷೆಯ 2ನೇ ಸುತ್ತಿನ ಆಯ್ಕೆ ಪಟ್ಟಿ ಪ್ರಕಟಗೊಂಡಿದ್ದು, ಬೆಳ್ಳಾರೆ ಜ್ಞಾನದೀಪ ಶಿಕ್ಷಣ ತರಬೇತಿ ಸಂಸ್ಥೆಯಿಂದ ತರಬೇತಿ ಪಡೆದ ಮೂವರು ವಿದ್ಯಾರ್ಥಿಗಳು ನವೋದಯ ಶಾಲೆಗೆ ಆಯ್ಕೆಯಾಗಿದ್ದಾರೆ. 2022-23ನೇ ಸಾಲಿನಲ್ಲಿ ಸಂಸ್ಥೆಯಿಂದ ಒಟ್ಟು 16 ವಿದ್ಯಾರ್ಥಿಗಳು ನವೋದಯ ಶಾಲೆಗೆ ಆಯ್ಕೆಯಾಗಿದ್ದಾರೆ.


ಪುತ್ತೂರು ತಾಲೂಕು ಅರಿಯಡ್ಕ ಗ್ರಾಮದ ಬಪ್ಪಪುಂಡೇಲು ದಿನೇಶ್ ಕುಮಾರ್ ಬಿ ಮತ್ತು ಪೂರ್ಣಿಮಾ ದಂಪತಿಗಳ ಪುತ್ರಿ ಪಾಪೆಮಜಲು ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಆಕಾಂಕ್ಷ ಡಿ. ಪಿ., ಪುತ್ತೂರು ತಾಲೂಕು ಕೊಳ್ತಿಗೆ ಗ್ರಾಮದ ಕೆಮ್ಮಾರ ಕೆ ಶಿವರಾಮ ಗೌಡ ಮತ್ತು ವೇದಾವತಿ ದಂಪತಿಗಳ ಪುತ್ರ ಪೆರ್ಲoಪಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕೆ. ಎಸ್ ಕಿಶನ್, ಸುಳ್ಯ ತಾಲೂಕು ಎಣ್ಮೂರು ಗ್ರಾಮದ ಗುತ್ತು ಸುದೀನ್ ಕುಮಾರ್ ರೈ ಕೆ ಜಿ ಮತ್ತು ನಳಿನಾಕ್ಷಿ ಬಿ ದಂಪತಿಗಳ ಪುತ್ರಿ ಅದ್ಯಾ ರೈ ಜಿ ನವೋದಯ ಶಾಲೆಗೆ ಆಯ್ಕೆಯಾಗಿದ್ದಾರೆ.


163 ವಿದ್ಯಾರ್ಥಿಗಳು ಆಯ್ಕೆ


ಜ್ಞಾನದೀಪ ಸಂಸ್ಥೆಯು 2008ರಿಂದ ನವೋದಯ ಪ್ರವೇಶ ಪರೀಕ್ಷೆಗೆ ಸಿದ್ಧಾತಾ ತರಗತಿ ನಡೆಸುತ್ತಿದ್ದು, 2022-23ನೇ ಸಾಲಿನವರೆಗೆ ಇಲ್ಲಿ ತರಬೇತಿ ಪಡೆದ 163 ವಿದ್ಯಾರ್ಥಿಗಳು ನವೋದಯ ಶಾಲೆಗೆ ಆಯ್ಕೆಯಾಗಿದ್ದಾರೆ. ಪ್ರಸಕ್ತ 2023-24ನೇ ಸಾಲಿನ ನವೋದಯ ಪ್ರವೇಶಕ್ಕೆ ಬೆಳ್ಳಾರೆ, ಸುಳ್ಯ ಮತ್ತು ಉಪ್ಪಿನಂಗಡಿಯಲ್ಲಿ ಸಿದ್ಧತಾ ತರಗತಿಗಳು ನಡೆಯುತ್ತಿದೆ.