ಬಿಜೆಪಿ-ಜೆಡಿಎಸ್ ಮೈತ್ರಿ ಸೀಟು ಹಂಚಿಕೆ ಬಗ್ಗೆ ದಸರಾ ಬಳಿಕ ಚರ್ಚೆ

0

ಜೆಡಿಎಸ್ ನ ಎಂ.ಎಲ್.ಎ, ಎಂ.ಎಲ್.ಸಿ, ಪಕ್ಷದ ಅಧ್ಯಕ್ಷ ಸಿ.ಎಂ. ಇಬ್ರಾಹಿಂ ಜೊತೆ ಎರಡು ಸುತ್ತು ಮಾತುಕತೆ ನಡೆಸಿ ನಿರ್ಧಾರ

ಸುಬ್ರಹ್ಮಣ್ಯದಲ್ಲಿ ಮಾಜಿ ಪ್ರಧಾನಿ ದೇವೇಗೌಡ ಹೇಳಿಕೆ

ಬಿಜೆಪಿ-ಜೆಡಿಎಸ್ ಮೈತ್ರಿ ಬಗ್ಗೆ ಮಾಹಿತಿ ನೀಡಿದ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಅವರು ಕುಮಾರಸ್ವಾಮಿಯವರು ಈಗಾಗಲೇ ಕೇಂದ್ರದ ಗೃಹಮಂತ್ರಿ ಜೊತೆ ಚರ್ಚೆ ನಡೆಸಿದ್ದಾರೆ. ಸೀಟು ಹಂಚಿಕೆಯ ಬಗ್ಗೆ ಇನ್ನಷ್ಟೆ ಚರ್ಚೆ ನಡೆಯಬೇಕಾಗಿದ್ದು, ದಸರಾ ಕಳೆದ ಮೇಲೆ ಸೀಟು ಹಂಚಿಕೆ ಬಗ್ಗೆ ಚರ್ಚೆ ನಡೆಯಲಿದೆ ಎಂದರು. ಅವರು ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿದ್ದ ಸಂದರ್ಭ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದರು.

ನನ್ನ ಆರೋಗ್ಯ ಸುಧಾರಿಸಿದ ಮೇಲೆ ನಾನು, ಕುಮಾರಸ್ವಾಮಿ ಮೈತ್ರಿಯ ಬಗ್ಗೆ ಚರ್ಚೆ ನಡೆಸಲಿದ್ದೇವೆ.
ಎನ್ ಡಿ ಎ ಮೈತ್ರಿಗೆ ಮೊದಲು ಜೆಡಿಎಸ್ ನ ೧೯ ಎಂ.ಎಲ್.ಎ , ,೮ ಎಂ.ಎಲ್.ಸಿ, ನಮ್ಮ ಪಕ್ಷದ ಅಧ್ಯಕ್ಷ ಸಿ.ಎಮ್. ಇಬ್ರಾಹಿಂ ಜೊತೆ ಎರಡು ಸುತ್ತು ಮಾತುಕತೆ ನಡೆಸಲಾಗಿದೆ.


ಬಳಿಕ ಕುಮಾರಸ್ವಾಮಿ ಗೃಹಮಂತ್ರಿ ಅಮಿತ್ ಶಾ ಜೊತೆ ಭೇಟಿ ಮಾಡಿ ಮೈತ್ರಿ ಬಗ್ಗೆ ಚರ್ಚಿಸಿದ್ದಾರೆ. ಈ ಹಿಂದಿನ ಚುನಾವಣೆಯ ಮತಗಳಿಕೆ ಒಟ್ಟು ಗೂಡಿಸಿ ಈ ನಿರ್ಧಾರಕ್ಕೆ ಬರಲಾಗಿದೆ. ಆದರೆ ಯಾವ ಕ್ಷೇತ್ರ ಯಾರಿಗೆ ಅನ್ನುವ ಬಗ್ಗೆ ನಿರ್ಧಾರ ಆಗಿಲ್ಲ.


ಹಾಸನ ಜೆಡಿಎಸ್, ರಾಮನಗರ ಕಾಂಗ್ರೆಸ್ ನಮ್ಮ ಕೈಯಲ್ಲಿದ್ದು ಉಳಿದೆಡೆ ಬಿಜೆಪಿ ಆಡಳಿತ ಇರೋದು. ಆದರೂ ಕಾಂಗ್ರೆಸ್ ಹೆಚ್ಚು ಸ್ಥಾನ ಗೆಲ್ಲುವ ಉತ್ಸಾಹದಲ್ಲಿದ್ದಾರೆ ಎಲ್ಲವನ್ನೂ ಅಳೆದು ತೂಗಿ ಅದೇ ಕಾರಣಕ್ಕೆ ಬಿಜೆಪಿ, ಜೆಡಿಎಸ್ ಒಂದುಗೂಡಿ ಹೋಗುವ ನಿರ್ಧಾರಕ್ಕೆ ಬಂದಿದ್ದೇವೆ. ಜಾತಿ ಆಧಾರದಲ್ಲಿ ಮತ ವಿಭಜನೆಯ ಬಗ್ಗೆ ಪತ್ರಕರ್ತರು ಪ್ರಶ್ನೆ ಕೇಳಿದಾಗ ನಾನು ಈ ಬಗ್ಗೆ ವಾದ ಮಾಡಲ್ಲ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಶೇಕಡವಾರು ಮತ ಬಿಜೆಪಿಗೆ ೩೦-೩೩ ,ಕಾಂಗ್ರೆಸ್ ೪೦, ಜೆಡಿಎಸ್ ೨೦- ೨೨ ಸಿಕ್ಕಿದೆ.


ಹೀಗಿರುವಾಗ ಈ ಬಾರಿಗೆ ಯಾರಿಗೆ ಓಟ್ ಮಾಡಬೇಕು ಅನ್ನುವುದನ್ನು ಮತದಾರರು ತೀರ್ಮಾನ ಮಾಡ್ತಾರೆ ಎಂದವರು ಹೇಳಿದರು. ಎಂ.ಬಿ .ಸಾದಾಶಿವ, ಜಾಕೆ ಮಾದವ ಗೌಡ, ರಾಕೇಶ್ ಕುಂಠಿಕಾನ, ತಿಲಕ್ ಎ ಮತ್ತಿತರರು ಉಪಸ್ಥಿತರಿದ್ದರು.