ಸುಬ್ರಹ್ಮಣ್ಯ: ಎಸ್ .ಎಸ್.ಪಿ.ಯು ಕಾಲೇಜಿಗೆ 1 ಲಕ್ಷ ದೇಣಿಗೆ

0

ಸುಬ್ರಹ್ಮಣ್ಯದ ಎಸ್ ಎಸ್ ಪಿಯು ಕಾಲೇಜಿಗೆ ಕಾಲೇಜಿನ ಹಿರಿಯ ವಿದ್ಯಾರ್ಥಿ ಉದ್ಯಮಿ ರಾಕೇಶ್ ಬೆಂಗಳೂರು ಅವರು 1ಲಕ್ಷ ರೂ ದೇಣಿಗೆ ನೀಡಿದ್ದಾರೆ.
ಅ.11 ಕಾಲೇಜಿಗೆ ಆಗಮಿಸಿ ಪ್ರಾಂಶುಪಾಲ ಸೋಮಶೇಖರ್ ನಾಯಕ್ ಅವರಿಗೆ ದೇಣಿಗೆಯ ಚೆಕ್ ಹಸ್ತಾಂತರಿಸಿದರು.
ಕಾಲೇಜಿನಲ್ಲಿ ನಡೆಯುವ ಸ್ಪಧಾತ್ಮಕ ಪರಿಕ್ಷಾ ತರಬೇತಿ ಕಾರ್ಯಕ್ಕೆ, ಕಾಲೇಜಿನಲ್ಲಿ ಗಾರ್ಡನಿಂಗ್, ತೂಗು ಹೂದಾನಿ ಅಳವಡಿಕೆ, ಮತ್ತು ಹೂದಾನಿ ಅಳವಡಿಕೆಗಾಗಿ ಈ ಮೊತ್ತವನ್ನು ದೇಣಿಗೆಯಾಗಿ ನೀಡಿದ್ದಾರೆ.
ಈ ಸಂದರ್ಭ ಉಪನ್ಯಾಸಕರಾದ ಸವಿತಾ ಕೈಲಾಸ್, ಜ್ಯೋತಿ ಪಿ ರೈ, ಸೌಮ್ಯಾ ದಿನೇಶ್, ಸುಧಾ ಮತ್ತಿತರರು ಉಪಸ್ಥಿತರಿದ್ದರು.